Akash Madhwal : ಸೂರ್ಯ ಬದಲು ಮುಂಬೈ ಸೇರಿದ ಆಕಾಶ್ ಮಧ್ವಲ್
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಗಾಯಗೊಂಡಿರುವ ಕಾರಣ ಐಪಿಎಲ್-2022 ರಿಂದ ಹೊರಗುಳಿದಿದ್ದಾರೆ.
ಹೀಗಾಗಿ ಇನ್ನುಳಿದಿರುವ ಎರಡು ಪಂದ್ಯಗಳಿಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತರಾಖಂಡದ ಮಧ್ಯಮ ವೇಗಿ ಆಕಾಶ್ ಮಧ್ವಲ್ ಸೇರ್ಪಡೆಯಾಗಿದ್ದಾರೆ.
ಉತ್ತರಾಖಂಡದ ಯುವ ಆಟಗಾರ 2019 ರಲ್ಲಿ ದೇಶೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.
ಆಕಾಶ್ ಮಧ್ವಲ್ ಬ್ಯಾಟ್ ಮತ್ತು ಬಾಲ್ ನಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.
ಇದುವರೆಗೆ 15 ಟಿ20 ಪಂದ್ಯಗಳನ್ನಾಡಿರುವ ಮಧ್ವಲ್ 15 ವಿಕೆಟ್ ಪಡೆದಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ 20 ಲಕ್ಷಕ್ಕೆ ಖರೀದಿಸಿದೆ.
ಈಗಾಗಲೇ ಪ್ಲೇ ಆಫ್ ರೇಸ್ ನಿಂದ ನಿರ್ಗಮಿಸಿರುವ ಮುಂಬೈ ಇಂಡಿಯನ್ಸ್ ಅಂತಿಮ ಪಂದ್ಯಗಳಲ್ಲಿ ಗೆದ್ದು ತನ್ನ ಘನತೆ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಮೇ 17 ರಂದು ಮುಂಬೈ ತನ್ನ ಮುಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. akash-madhwal-replacement-suryakumar-yadav