ಜೈಪುರ : ‘ಆಲ್ಕೋಹಾಲ್ ಕೈಗೆ ಉಜ್ಜುವುದರಿಂದ ಕೊರೊನಾ ವೈರಸ್ ಸತ್ತುಗೋಗುವುದಾದರೆ ಅದನ್ನು ಕುಡಿದರೆ ಗಂಟಲಲ್ಲೇ ನಾಶವಾಗಬಹುದು’ ಎಂದು ರಾಜಸ್ಥಾನದ ಸಾಂಗೋದ್ ಕಾಂಗ್ರೆಸ್ ಶಾಸಕ ಭರತ್ ಸಿಂಗ್ ಎಂದು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿರುವ ಭರತ್ ಸಿಂಗ್, ಲಾಕ್ ಡೌನ್ ವೇಳೆ ಮದ್ಯ ಮಾರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡದ ಹಿನ್ನೆಲೆಯಲ್ಲಿ ವೈನ್‌ಶಾಪ್‌ಗಳು ಮುಚ್ಚಿರುವುದರಿಂದ ಸರ್ಕಾರದ ಆದಾಯದ ಬೆನ್ನೆಲುಬೇ ಮುರಿದಂತಾಗಿದೆ ಎಂದು ಉಲ್ಲೇಖಿಸಿದ್ದಾರೆ.
‘ಆಲ್ಕೋಹಾಲ್ ಕೈಗೆ ಉಜ್ಜುವುರಿಂದ ಕೋವಿಡ್-19 ವೈರಸ್ ಸಾಯುವುದಾದರೆ ಅದನ್ನು ಕುಡಿಯುವವರ ಗಂಟಲಿನಲ್ಲೇ ವೈರಸ್ ಸತ್ತುಹೋಗಬಹುದು. ಅಕ್ರಮ ಮದ್ಯ ಸೇವನೆಗಿಂತ ಇದು ಉತ್ತಮ’ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.
ಮದ್ಯದಂಗಡಿಗಳ ತೆರೆಯುವಿಕೆಗೆ ಅವಕಾಶ ನೀಡದೇ ಇರುವುದರಿಂದ ಅಕ್ರಮ ಮದ್ಯ ತಯಾರಿಕೆ, ಮಾರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ. ಅಕ್ರಮ ಮದ್ಯವು ಜನರನ್ನು ಸಾಯಿಸುವುದು ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟುಮಾಡುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.