10 ಸಾವಿರ ಕೊಡದ ಪತ್ನಿಯನ್ನು ಬರ್ಬರವಾಗಿ ಕೊಂದ ಕುಡುಕ..!
ಕೋಲಾರ : ಕುಡುಕನೊಬ್ಬ ತನ್ನ ಪತ್ನಿ ಬಳಿ 10 ಸಾವಿರ ಹಣಕ್ಕಾಗಿ ಪೀಡಿಸಿದ್ದು, ನಿರಾಕರಿಸಿದಕ್ಕೆ ಆಕೆಯನ್ನ ಬರ್ಬರವಾಗಿ ಕೊಲೆಗೈದ ಘಟನೆ ಕೋಲಾರದಲ್ಲಿ ನಡೆದಿದೆ. ಆಕೆ ತಾನು ಕಷ್ಟ ಪಟ್ಟು ಕೂಡಿಟ್ಟ ಹಣವನ್ನು ಕೊಡೋದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಗಲಾಟೆ ನಡೆದು , ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡಿದೆ. ಮನೆಯಲ್ಲಿದ್ದ ಸುತ್ತಿಗೆಯಿಂದ ಪತ್ನಿಯ ತಲೆಗೆ ಹೊಡೆದ ಪರಿಣಾಮ, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕಾನೂನು ವಿರೋಧಿ ಪೋಸ್ಟ್ ಗಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ..!
ಕೋಲಾರದ ನಾಗನಾಳ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ವಿಜಲಯಲಕ್ಷ್ಮಿ ಮೃತ ದುರ್ದೈವಿಯಾಗಿದ್ದು, ಸೋಮಶೇಖರ್ ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯ ಮೇಲೆ ಬಲವಾಗಿ ಸುತ್ತಿಗೆಯಿಂದ ಹೊಡೆದ ಬಳಿಕ ಈತ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವದಿಂದ ಬೆಳಿಗ್ಗೆಯವರೆಗೂ ವಿಜಯಲಕ್ಷ್ಮೀ ನರಳಾಡಿದ್ದು, ಬಳಿಕ ನೆರೆಹೊರೆಯವರು ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಆಕೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಕೋಲಾರ ಹೆಚ್ಚುವರಿ ಎಸ್ಪಿ ಜಾಹ್ನವಿ, ಗ್ರಾಮಾಂತರ ಪೊಲೀಸರು, ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.