‘ದಳಪತಿ’ ರೆಕಾರ್ಡ್ ಮುರಿದ ‘ಪುಷ್ಪರಾಜ್’..!
ಬಾಲಿವುಡ್ ಮುಂದೆ ಸೌತ್ ಸಿನಿಮಾ ಇಂಡಸ್ಟ್ರಿ ಅಬ್ಬರಿಸುತ್ತಿದೆ… ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಬಾಲಿವುಡ್ ಸಿನಿಮಾರಂಗಕ್ಕೆ ಶಾಕ್ ನೀಡಿದೆ ಸೌತಯ್ ಸಿನಿಮಾ ಇಂಡಸ್ಟ್ರಿ.. ಇತ್ತೀಚೆಗೆ ರಿಲೀಸ್ ಆದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆ ಮಾಡಿದ್ದು , ದೊಡ್ಡ ದೊಡ್ಡ ಸೌತ್ ಇಂಡಿಯಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ.. ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹಿಂದಿಯ 83 ಸಿನಿಮಾಗೆ ಸಖತ್ ಟಕ್ಕರ್ ಕೊಟ್ಟಿದೆ..
ಈಗಾಗಲೇ KGF ದಾಖಲೆ ಮುರಿದಿರುವ ಪುಷ್ಪ ಸಿನಿಮಾ ಈಗ ತಂಇಲಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ‘ಬಿಗಿಲ್’ ಸಿನಿಮಾ ದಾಖಲೆ ಮುರಿದಿದೆ.. ಪುಷ್ಪ ತೆಲುಗು ಮತ್ತು ಹಿಂದಿಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಮೂಲಕ ಸಂಪೂರ್ಣ ಗಳಿಕೆಯ ಲೆಕ್ಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಪುಷ್ಪ ಚಿತ್ರದ ಕಲೆಕ್ಷನ್ 300 ಕೋಟಿ ದಾಟಿದೆ. ರಿಲೀಸ್ ಆದ ಅತಿ ಕಡಿಮೆ ದಿನಗಳಲ್ಲಿ ಪುಷ್ಪ ದಾಖಲೆ ಮಟ್ಟದ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಅದರಲ್ಲೂ ಹಿಂದಿ ವರ್ಷನ್ ನಿಂದಲೇ ಉತ್ತಮ ಗಳಿಕೆ ಆಗುತ್ತಿದೆ.
ನಟ ವಿಜಯ್ ಅಭಿನಯದ ತಮಿಳು ಚಿತ್ರ ಬಿಗಿಲ್ 2019ರಲ್ಲಿ ತೆರೆ ಕಂಡಿತು. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ 304.7 ಕೋಟಿ ರೂಪಾಯಿ. ಈ ಲೆಕ್ಕವನ್ನು ರಿಲೀಸ್ ಆದ 3ನೇ ವಾರಕ್ಕೆ ಪುಷ್ಪ ಮುರಿದಿದೆ.. ಪುಷ್ಪ ಸಿನಿಮಾ 306 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ..