ಹೆಂಡತಿಗಾಗಿ ಆಕ್ಸಿಜನ್ ಸಿಲಿಂಡರ್ ತುಂಬಿದ್ದ ಆಂಬ್ಯುಲೆನ್ಸ್ ಹೈ ಜ್ಯಾಕ್ ಮಾಡಿದ ಭೂಪ… ಯಾಕೆ ಗೊತ್ತಾ..?
ಮಧ್ಯಪ್ರದೇಶ : ಪತಿಯೊಬ್ಬ ತನ್ನ ಗರ್ಭೀಣಿ ಪತ್ನಿಗಾಗಿ ಆಕ್ಸಿಜನ್ ಸಿಲಿಂಡರ್ ಇದ್ದ ಆಯಂಬುಲೆನ್ಸ್ ಅನ್ನೇ ಹೈಜಾಕ್ ಮಾಡಿರುವ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ನಡೆದಿದೆ. ಹೌದು ಆತನ ಗರ್ಭಿಣಿ ಪತ್ನಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು.
ಶುಕ್ರವಾರ ರಾತ್ರಿಯಿಂದ ಆಕೆಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತ ಆಯಂಬುಲೆನ್ಸ್ಗೆ ಕರೆ ಮಾಡಿ ನನ್ನ ಹೆಂಡತಿಯನ್ನು ದಾಖಲಿಸಿಕೊಳ್ಳಿ ಎಂದು ಮನವಿ ಮಾಡಿದ್ದಾನೆ. ಆದರೆ ರಾತ್ರಿ ಆಯಂಬುಲೆನ್ಸ್ ಬಂದಿಲ್ಲ. ಶನಿವಾರ ಬೆಳಗ್ಗೆ 9.30ರ ಸಮಯಕ್ಕೆ ಆಯಂಬುಲೆನ್ಸ್ ಬಂದಿದೆ.
ಆಂಬ್ಯುಲೆನ್ಸ್ ಆಕ್ಸಿಜನ್ ಸಿಲಿಂಡರ್ ಇರುವುದನ್ನು ಕಂಡ ಪತಿ, ಅದರ ಡ್ರೈವರ್ನ್ನು ಕೆಳಗಿಳಿಸಿ, ಗಾಡಿಯೊಳಗೆ ಸೇರಿಕೊಂಡಿದ್ದಾನೆ. ಮನೆಯಿಂದ ಸ್ವಲ್ಪ ದೂರ ಹೋಗಿ ಅಲ್ಲಿಯೇ ಗಾಡಿ ನಿಲ್ಲಿಸಿಕೊಂಡಿದ್ದಾನೆ.
ಆಂಬ್ಯುಲೆನ್ಸ್ ಡ್ರೈವರ್ ಈ ವಿಚಾರವಾಗಿ ಮೇಲಿನ ಅಧಿಕಾರಿಗೆ ಮಾಹಿತಿ ನೀಡಿದ್ದಾನೆ. ಅದಾದ ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಪೊಲೀಸರು ಆತನನ್ನು ಹುಡುಕಿದ್ದಾರೆ. ಸತತ ಎರಡು ಗಂಟೆಗಳ ಕಾಲ ಮನವೊಲಿಸುವ ಪ್ರಯತ್ನ ಮಾಡಿ ನಂತರ ಆತನ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೊನಾ ಸೋಂಕಿತರ ನೆರವಿಗೆ ಮುಂದಾದ ಅಕ್ಷಯ್ – ಗಂಭೀರ್ ಫೌಂಡೇಶನ್ ಗೆ 1 ಕೋಟಿ ರೂ. ದೇಣಿಗೆ..!