ತನ್ನ ಶಕ್ತಿಶಾಲಿ ಬಾಂಬರ್ ಗಳ ಹಾರಾಟದ ಮೇಲೆ ಅಮೆರಿಕ ನಿರ್ಬಂಧ..!

1 min read
Joe Biden rejoin who

ತನ್ನ ಶಕ್ತಿಶಾಲಿ ಬಾಂಬರ್ ಗಳ ಹಾರಾಟದ ಮೇಲೆ ಅಮೆರಿಕ ನಿರ್ಬಂಧ..!

ವಿಶ್ವದ ಶಕ್ತಿಶಾಲಿ ಬಾಂಬರ್ ಬಿ-1 ಬಿ ಹಾರಾಟದ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಈ ಆದೇಶದ ಬೆನ್ನಲ್ಲೇ ಅಮೆರಿಕಲ್ಲಿರೋ ಎಲ್ಲಾ 100 ಬಿ1-ಬಿ ವಿಮಾನಗಳನ್ನು ವಿವಿಧ ವಾಯುನೆಲೆಗಳಲ್ಲಿ ಇಳಿಸಿ, ನಿಲ್ಲಿಸಲಾಗಿದೆ.

ರಷ್ಯಾದ ಜೊತೆಗೆ ಸಂಘರ್ಷ ಹೆಚ್ಚಿರುವ ಹೊತ್ತಲ್ಲೇ ಈ ವಿಮಾನಗಳ ಹಾರಾಟದ ಮೇಲೆ ನಿರ್ಬಂಧ ವಿಧಿಸಿದೆ. ಆದ್ರೆ ಇನ್ನು ಎಷ್ಟು ಸಮಯದವರೆಗೆ ಈ ರೀತಿ ಇವುಗಳ ಹಾರಾಟದ ಮೇಲೆ ನಿರ್ಬಂಧ ಇರುತ್ತೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

ಅಮೆರಿಕ ಸೇನೆಗೆ ಒಂದು ರೀತಿಯ ಚಿಂತೆಯ ವಿಚಾರವಾಗಿದೆ. ಏಪ್ರಿಲ್ 8ರಂದು ಅಮೆರಿಕದ ಸೌತ್ ಡಕೋಟಾದಲ್ಲಿರೋ ಎಲ್ಸ್ವರ್ಥ್ ವಾಯುನೆಲೆಯಲ್ಲಿ ಬಿ1-ಬಿ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು.

ತನಿಖೆ ನಡೆಸಿದಾಗ ಈ ವಿಮಾನದ ಫ್ಯೂಯಲ್ ಪಂಪ್ ಫಿಲ್ಟರ್ ಹೌಸ್ನಲ್ಲಿ ದೊಡ್ಡ ಹೋಲ್ ಆಗಿರೋದು ಪತ್ತೆಯಾಗಿತ್ತು. ಇದ್ರ ಬೆನ್ನಲ್ಲೇ ವಿಶ್ವದ ವಿವಿಧ ಭಾಗಗಳಲ್ಲಿರೋ ಅಮೆರಿಕದ ಈ ಯುದ್ಧ ವಿಮಾನಗಳ ಹಾರಾಟ ನಿರ್ಬಂಧಿಸಲಾಗಿದೆ.

ಉತ್ತರಾಖಂಡ್ ನಲ್ಲಿ ಮತ್ತೊಮ್ಮೆ ಹಿಮಸ್ಫೋಟ : 8ಕ್ಕಿಂತ ಅಧಿಕ ಮಂದಿ ಸಾವು – 438 ಜನರ ರಕ್ಷಣೆ

ಎರಡು ದಿನವಲ್ಲ, ವಾರ ಪೂರ್ತಿ ಡೇ ಅಂಡ್ ನೈಟ್ ಕರ್ಫ್ಯೂ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd