America
ಅಮೆರಿಕ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಜಯಗಳಿಸಿದ್ದು, ಭಾರತೀಯರಿಗೆ ಲಾಭವಾಗಿರೋವಂತೆ ಕಾಣ್ತಿದೆ. ಇತ್ತೀಚೆಗೆ 5 ಲಕ್ಷ ಭಾರತೀಯರಿಗೆ ಅಮೆರಿಕಾದ ಪೌರತ್ವ ನೀಡುವುದಾಗಿ ಘೋಷಣೆ ಮಾಡಿದ್ದ ಬಿಡೆನ್ ಅವರ ಅಧ್ಯಕ್ಷತೆಯಲ್ಲಿ 20ಕ್ಕೂ ಹೆಚ್ಚು ಭಾರತೀಯರಿಗೆ ಸ್ಥಾನ ಸಿಗಲಿದೆ ಎನ್ನಲಾಗ್ತಿದೆ. ಇದೀಗ ಅಮೆರಿಕದ ಕೊವಿಡ್ 19 ಟಾಸ್ಕ್‌ಫೋರ್ಸ್‌ನ ಸಲಹಾ ಸಮಿತಿಗೆ ಭಾರತ ಮೂಲದ ವೈದ್ಯೆ ಸೆಲೈನ್ ಗೌಂಡರ್ ಅವರನ್ನು ನೇಮಕಮಾಡಲಾಗಿದೆ.
ಸೆಲೈನ್ ಅವರು ಮೂಲತಹ ಭಾರತದವರು. ಅವರ ತಂದೆ ತಮಿಳುನಾಡಿನ ಮೊದಕುರಿಚಿ ಬಳಿಯ ಪೆರುಮಪಾಳಯಂದವರು. ಆದ್ರೆ ಅವರ ಕುಟುಂಬ 1960ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಸಲೈನ್ ಅವರು ಅಮೆರಿಕದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸಲೈನ್ ಅವರು ಇಂದಿಗೂ ತನ್ನ ಹಳ್ಳಿ ಜೊತೆ ಸಂಪರ್ಕ ಹೊಂದಿದ್ದು, ರಾಜ್ ಗೌಂಡರ್ ಪ್ರತಿಷ್ಠಾನ ಮೂಲಕ ಸ್ಥಳೀಯ ಸರ್ಕಾರಿ ಮಾಧ್ಯಮಿಕ ಶಾಲೆಗೆ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕಾದ ಉಪಾಧ್ಯಕ್ಷರಾಗಿರಿವ ಬೆನ್ನಲ್ಲೇ ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಅಮೆರಿಕಾದ ಉನ್ನತ ಸ್ಥಾನಗಳು ಸಿಗುತ್ತಿರುವುದು ಸಂತಸದ ವಿಚಾರವಾಗಿದೆ.
America
ದೀಪಾವಳಿ ನಂತ್ರ ಡಿಗ್ರಿ ಕಾಲೇಜು ಓಪನ್; ಡಿಸೆಂಬರ್15ರಿಂದ ಶಾಲಾ ಕಾಲೇಜಿಗೆ ಮುಹೂರ್ತ..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel