ಭಾರತಕ್ಕೆ 60 ಮಿಲಿಯನ್ ಲಸಿಕೆ ನೀಡುವಂತೆ ಅಮೆರಿಕಾ ಅಧ್ಯಕ್ಷರಿಗೆ ಒತ್ತಾಯ
ಅಮೆರಿಕಾ : ದೇಶದಲ್ಲಿ ಕೋವಿಡ್ 2ನೇ ಅಲೆ ಭೀತಿಗೆ ಜನ ತತ್ತರಿಸಿ ಹೋಗಿದ್ದಾರೆ. ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಭಾರತಕ್ಕೆ 60 ಮಿಲಿಯನ್ ಕೊರೊನಾ ಲಸಿಕೆ ನೀಡುವಂತೆ ಅಧ್ಯಕ್ಷ ಜೋ ಬೈಡೆನ್ ಅವರನ್ನು ಅಮೆರಿಕಾದ ಪ್ರಖ್ಯಾತ ನಾಗರೀಕ ಹಕ್ಕು ಹೋರಾಟಗಾರ ರೆವರೆಂಡ್ ಜೆಸ್ಸಿ ಎಲ್ ಜಾಕ್ಸನ್ ಅವರು ಒತ್ತಾಯಿಸಿದ್ದಾರೆ.
ಹೌದು.. ಇಡಿ ವಿಶ್ವದಲ್ಲಿ ಅತಿ ಹೆಚ್ಚು ಬಾಧಿತವಾಗಿರುವ ಭಾರತಕ್ಕೆ ಮಾನವೀಯತೆ ಆಧಾರದ ಮೇಲೆ 60 ಮಿಲಿಯನ್ ಲಸಿಕೆ ನೀಡುವಂತೆ ಭಾರತೀಯ ಮುಖಂಡರ ಸಮ್ಮುಖದಲ್ಲಿ ಬಹಿರಂಗವಾಗಿ ಒತ್ತಾಯ ಮಾಡಿದ್ದಾರೆ.
ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವುದು ಪ್ರತಿಯೊಬ್ಬರ ಕರ್ತವ್ಯ ಹೀಗಾಗಿ ಬೈಡೆನ್ ಅವರು ಭಾರತಕ್ಕೆ 60 ಮಿಲಿಯನ್ ಆಸ್ಟ್ರಾಜನಿಕ್ ಲಸಿಕೆಗಳನ್ನು ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಭಾರತಕ್ಕೆ ತುರ್ತಾಗಿ ಬೇಕಾಗಿರುವ ರೆಮಿಡಿಸಿವಿರ್ ಹಾಗೂ ಟೋಸಿಲ್ಝುಂಬಾ ಔಷಧಿಗಳನ್ನು ಭಾರತಕ್ಕೆ ಸರಬರಾಜು ಮಾಡುವಂತೆ ಅಮೆರಿಕಾ-ಭಾರತ ಸ್ನೇಹಿತರ ಸಮಿತಿ ಅಧ್ಯಕ್ಷ ಡಾ.ಭರತ್ ಬರಾಯಿ ಆಗ್ರಹಿಸಿದ್ದಾರೆ.
ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಅನೇಕ ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ರೆ , ಇನ್ನೂ ಹಲವರು ಕುಟುಂಬಸ್ಥರು , ಆಪ್ತರು , ಸ್ನೇಹಿತರನ್ನ ಕಳೆದುಕೊಂಡಿದ್ದಾರೆ.. ಮತ್ತು ಹಲವು ಕುಟುಂಬಗಳ ಆಧಾರಸ್ಥಂಬವೆನಿಸಿಕೊಂಡಿದ್ದರು ಕೊರೊನಾಗೆ ಬಲಿಯಾಗಿದ್ದು, ಕುಟುಂಬಗಳು ದಿಚ್ಚು ತೋಚದ ಪರಿಸ್ಥಿತಿಗೆ ತಲುಪಿವೆ.. ಸಿನಿಮಾ ತಾರೆಯರು ಮೃತಪಟ್ಟಿದ್ದಾರೆ. ಸೆಲೆಬ್ರಿಟಿಗಳು ಸಹ ತಮ್ಮವರನ್ನ ಕಳೆದುಕೊಂಡಿದ್ದಾರೆ.. ಇನ್ನೂ ವಿಪರ್ಯಾಸವೆಂದ್ರೆ ಮದುವೆಗೆ ಇನ್ನು ಒಂದೆರೆಡು ದಿನಗಳಿರುವಾಗಲೇ ವರ ಅಥವ ವಧು ಮೃತಪಟ್ಟಿರುವ ಘಟನೆಗಳು , ಮದುವೆಯಾದ ವಾರ -10 ದಿನಗಳೊಳಗೇ ಗಂಡ ಅಥವ ಹೆಂಡತಿ ಸಾವನಪ್ಪಿರುವುದು ಇಂತಹ ಮನಕಲುಕುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.