ಕೋವಿಡ್‌ ಪರಿಹಾರ , ಭಾರತ–ಚೀನಾ ಗಡಿ ಕುರಿತಾಗಿ  ಜೈಶಂಕರ್‌ ಜೊತೆಗಿನ ಚರ್ಚೆ ಬಗ್ಗೆ ಟ್ವೀಟ್  ಮಾಡಿದ ಬ್ಲಿಂಕೆನ್‌

1 min read

ಕೋವಿಡ್‌ ಪರಿಹಾರ , ಭಾರತ–ಚೀನಾ ಗಡಿ ಕುರಿತಾಗಿ  ಜೈಶಂಕರ್‌ ಜೊತೆಗಿನ ಚರ್ಚೆ ಬಗ್ಗೆ ಟ್ವೀಟ್  ಮಾಡಿದ ಬ್ಲಿಂಕೆನ್‌

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಕೋವಿಡ್‌ ಪರಿಹಾರ, ಭಾರತ–ಚೀನಾ ಗಡಿ ಪರಿಸ್ಥಿತಿ ಸೇರಿದಂತೆ ಇತರೆ ವಿಷಯಗಳ ಕುರಿತಾಗಿ ಮಹತ್ವದ ಚರ್ಚೆ ನಡೆಸಿರುವುದಾಗಿ  ಹೇಳಿಕೊಂಡಿದ್ದಾರೆ.

ಅಮೆರಿಕದ ವಿದೇಶಾಂಗ ಇಲಾಖೆಯ ಕೇಂದ್ರ ಕಚೇರಿ ಫಾಗ್ಗಿ ಬಾಟಮ್‌ನಲ್ಲಿ ಜೈ ಶಂಕರ್‌ ಮತ್ತು ಬ್ಲಿಂಕೆನ್ ಸಭೆ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಬ್ಲಿಂಕೆನ್, ಪ್ರಾದೇಶಿಕ ಭದ್ರತೆ, ಅಮೆರಿಕದಿಂದ ಕೋವಿಡ್‌ ಪರಿಹಾರ ಪ್ರಯತ್ನಗಳು, ಭಾರತ–ಚೀನಾ ಗಡಿ ಪರಿಸ್ಥಿತಿ ಮತ್ತು ಅಫ್ಘಾನಿಸ್ತಾನಕ್ಕೆ ಸಹಕಾರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಜೈಶಂಕರ್‌ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವಿಷಯಗಳ ಬಗ್ಗೆ ಉಭಯ ರಾಷ್ಟ್ರಗಳು ಜಂಟಿಯಾಗಿ ಕೆಲಸ ಮಾಡಲಿವೆ ಎಂದಿದ್ದಾರೆ.

ಇನ್ನೂ ದ್ವಿಪಕ್ಷೀಯ ಸಹಕಾರ ಮತ್ತು ಪ್ರಾದೇಶಿಕ, ಜಾಗತಿಕ ವಿಷಯಗಳ ಕುರಿತು ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವೇಳೆ ಇಂಡೋ–ಫೆಸಿಫಿಕ್, ಕ್ವಾಡ್‌, ಅಫ್ಘಾನಿಸ್ತಾನ, ಮ್ಯಾನ್ಮಾರ್‌, ಯುಎನ್‌ಎಸ್‌ಸಿ ಮತ್ತು ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಲಸಿಕೆ ಪೂರೈಕೆ ಹೆಚ್ಚಿಸುವಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವದ ಕುರಿತಾಗಿಯೂ ಚರ್ಚೆ ನಡೆಸಲಾಗಿದೆ. ಈ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸಿದೆ ಎಂದಿದ್ದಾರೆ.

ಕೊರೊನ ಮಹಾಮಾರಿ:

 ಕೊರೊನ ವೈರಸ್  ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.

 ತಪ್ಪದೇ ಹೊರಗೆ ಹೋದಾಗ  ಸ್ವಚ್ಛವಾದ ಮಾಸ್ಕ ಧರಿಸಿ.

 ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

 ಜನ ನಿಬಿಡ ಪ್ರದೇಶದಿಂದ ದೂರವಿರಿ.

 ಮನೆ ಸಮೀಪದ  ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

 ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

 ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ  ಸ್ನಾನ ಮಾಡಿ.

 ನಮ್ಮ  ಹೋರಾಟ ಕೊರೊನ ನಿರ್ಮೂಲನೆಯತ್ತ.

 ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd