ಕೊರೊನಾ ಹಾವಳಿ – ‘ಅಮೇರಿಕನ್ನರು ಭಾರತ ಪ್ರವಾಸ ಕೈಗೊಳ್ಳಬಾರದು’..!
ಅಮೆರಿಕಾ : ಭಾರತದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಯಲ್ಲಿ ಅಮೆರಿಕನ್ನರು ಭಾರತ ಪ್ರವಾಸ ಕೈಗೊಳ್ಳಬಾರದು ಎಂದು ರೋಗ ನಿಯಂತ್ರಣ ಕೇಂದ್ರ ಮನವಿ ಮಾಡಿಕೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕಾ ತಿಳಿಸಿದೆ.
ಹೀಗಾಗಿ ಕೊರೊನಾ ಸೋಂಕು ನಿವಾರಣೆಗೆ ಭಾರತದೊಂದಿಗೆ ಕೈಜೋಡಿಸಲಾಗುವುದು. ಯಾವುದೇ ದೇಶ ಸಂಕಷ್ಟಕ್ಕೆ ಈಡಾದಾಗ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.