“ಕೊರೊನಾದಿಂದ  ಬಚಾವಾಗೋದಕ್ಕೆ ಇರೋದೊಂದೇ ದಾರಿ ಲಸಿಕೆ ಹಾಕಿಸಿಕೊಳ್ಳುವುದು” – ಬೈಡನ್‌

1 min read
Joe Biden rejoin who

“ಕೊರೊನಾದಿಂದ  ಬಚಾವಾಗೋದಕ್ಕೆ ಇರೋದೊಂದೇ ದಾರಿ ಲಸಿಕೆ ಹಾಕಿಸಿಕೊಳ್ಳುವುದು” – ಬೈಡನ್‌

ವಿಶ್ವಾದ್ಯಂತ ಕೊರೊನಾ 2ನೇ ಅಲೆ ಇನ್ನೇನು ತಗ್ಗುತ್ತಿದೆ ಅನ್ನೋ ಹೊತ್ತಲ್ಲಿ ಮತ್ತೆ ಹಲವು ದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗ್ತಿದೆ.. ಈ ಪೈಕಿ ಅಮೆರಿಕಾವು ಕೂಡ ಒಂದು.. ಸೋಂಕು ಪ್ರಮಾಣ ಹೆಚ್ಚಾಗ್ತಾಯಿದ್ರೂ  ಸಹ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗ್ತಾ ಇದೆ.. ಹೀಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಳವಳ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕನ್ನರು ಲಸಿಕೆ ಪಡೆಯುವುದು ಅತಿ ಮುಖ್ಯ ಎಂದು ಮನವಿ ಮಾಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಸಾಂಕ್ರಾಮಿಕ ರೋಗ ತಗುಲಲಿದೆ. ಡೆಲ್ಟಾ ರೂಪಾಂತರದ ಹರಡುವಿಕೆಯು ದೇಶದಾದ್ಯಂತ ಸೋಂಕು ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದ್ದರಿಂದ ಲಸಿಕೆ ಪಡೆಯದೇ ಇರುವುದು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಮುಂಬರುವ ತಿಂಗಳಲ್ಲಿ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲು ಅನುಮೋದನೆ ನೀಡಲಾಗುವುದು ಎಂದು ಬೈಡನ್ ಭರವಸೆ ವ್ಯಕ್ತಪಡಿಸಿದ್ದಾರೆ.   ಅಲ್ಲದೇ ನೀವು ಲಸಿಕೆ ಹಾಕಿಸಿದರೆ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ, ತೀವ್ರ ನಿಗಾ ಘಟಕದಲ್ಲಿ ದಾಖಲಾಗುವುದಿಲ್ಲ, ನೀವು ಸಾಯುವುದಿಲ್ಲ. ಹಾಗಾಗಿ ತಮ್ಮ ಸಹವರ್ತಿಗಳ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬ ಅಮೆರಿಕನ್ನರು ಲಸಿಕೆ ಹಾಕಿಸಿಕೊಳ್ಳುವುದು ಅತಿ ಮುಖ್ಯವಾಗಿದೆ’ ಎಂದು ಕರೆ ನೀಡಿದ್ದಾರೆ.

ಅಮೆರಿಕದಲ್ಲಿ ಲಸಿಕೆ ಹಾಕಿಸಿಕೊಳ್ಳದವರಲ್ಲಿ ಸೋಂಕಿನ ಪ್ರಮಾಣ ಹೆಚ್ಚಳ ಹಾಗೂ ಸಾವಿನ ಪ್ರಕರಣ ಕಂಡುಬರುತ್ತಿದೆ. ಕಳೆದ ಮೂರು ವಾರಗಳಲ್ಲಿ ಸೋಂಕಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಜುಲೈ 6ರಂದು ದೈನಂದಿನ 13,700 ಪ್ರಕರಣಗಳು ದಾಖಲಾಗಿದ್ದರೆ ಮಂಗಳವಾರದಂದು 37,000ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಡೆಲ್ಟಾ ರೂಪಾಂತರ ಹಾಗೂ ಲಸಿಕೆ ಅಭಿಯಾನವು ನಿಧಾನವಾಗಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಗೊತ್ತಾ..? ಇವುಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚು..!

ಇನ್ನೂ 40 ಕೋಟಿ ಭಾರತೀಯರಿಗೆ ಕರೊನಾ  ಕಂಟಕ – ವರದಿಯಿಂದ ಆಘಾತಕಾರಿ ವಿಚಾರ ಬಹಿರಂಗ

ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ – ಗಡಿಯಲ್ಲಿ ಬಿಗಿ ಭದ್ರತೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd