ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಗೊತ್ತಾ..? ಇವುಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚು..!

1 min read

ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಗೊತ್ತಾ..? ಇವುಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚು..!

ಕಾರುಗಳು ಇತರೇ ಗ್ಯಾಜೆಟ್ ಗಳಿಂದಲೇ ಹೆಚ್ಚು ಇಂಗಾಲದ ಡೈ ಆಕ್ಸೈಡ್  ರಿಲೀಸ್ ಆಗುತ್ತೆ.. ಇದ್ರಿಂದ ಹೆಚ್ಚಾಗಿ ಪರಿಸರ ಮಾಲಿನ್ಯಗೊಳ್ಳುತ್ತೆ ಅನ್ನೋದು ಅನೇಕರ ಯೋಚನೆ.. ಆದ್ರೆ ಅಸಲಿಗೆ  ಕಾಡುಹಂದಿಗಳಿಂದ ಪರಿಸರಕ್ಕೆ ಸೇರಿರುವ ಇಂಗಾಲದ ಡೈ ಆಕ್ಸೈಡ್  10 ಲಕ್ಷ ಕಾರುಗಳಿಂದ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‌ ಗೆ ಸಮ ಎಂಬ ವರದಿ ಇದೀಗ ಬಹಿರಂಗವಾಗಿದ್ದು, ಬೆಚ್ಚಿಬೀಳಿಸಿದೆ.. ಕೃಷಿ ಬೆಳೆಗಳನ್ನು ಹಾಳು ಮಾಡುವ ಮೂಲಕ ರೈತರಿಗೆ ಸದಾ ತೊಂದರೆ ಕೊಡುವ ಕಾಡು ಹಂದಿಗಳು ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿಗಳು ಎಂದು ಗುರುತಿಸಿಕೊಂಡಿವೆ.  ಕಾಡು ಹಂದಿಗಳು ಅತಿಹೆಚ್ಚು ಇಂಗಾಲದ ಡೈ ಆಕ್ಸೈಡ್‌ ಹೊರ ಸೂಸುವಿಕೆಗೂ ಕಾರಣವೆಂದು ತಜ್ಞರು ಹೇಳಿದ್ದಾರೆ.

ಈ ದೇಶದಲ್ಲಿನ ಮಸಾಜ್ ವರ್ಲ್ಡ್ ಫೇಮಸ್..! ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ..! ಇಲ್ಲಿನ ಆಚಾರ ವಿಚಾರಗಳು ಭಾರತಕ್ಕೆ ಭಿನ್ನವಾಗಿಲ್ಲ..!

ಅಂದ್ಹಾಗೆ ತೈವಾನ್‌ ಪ್ರದೇಶವೊಂದರಲ್ಲಿ ಕಾಡು ಹಂದಿಗಳಿಂದಾಗಿ ಒಂದು ವರ್ಷದಲ್ಲಿ ಪರಿಸರಕ್ಕೆ ಸೇರಿದ ಇಂಗಾಲದ ಡೈಆಕ್ಸೈಡ್‌ ಪ್ರಮಾಣವು 49 ಲಕ್ಷ ಟನ್‌. ಅಂದ್ರೆ ಇದು 10 ಲಕ್ಷ ಕಾರುಗಳಿಂದ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‌ಗೆ ಸಮ ಎಂದು ಸಂಶೋಧಕರು ಹೇಳಿದ್ದಾರೆ. ಆಸ್ಟ್ರೇಲಿಯಾವನ್ನು ಒಳಗೊಂಡ ಒಶಾನಿಯಾದಲ್ಲಿ ಕಾಡು ಹಂದಿಗಳಿಂದಾಗಿ ಪರಿಸರದ ಮೇಲೆ ಹಾನಿ ಹೆಚ್ಚು ಸಂಭವಿಸುತ್ತಿದೆ ಎಂಬುದನ್ನು ತಜ್ಞರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.pig saakshatv

ಕಾಡು ಹಂದಿಗಳು ಅತ್ಯಂತ ಅಪಾಯಕಾರಿ ಎಂದೆನಿಸಿಕೊಳ್ಳಲು ಪ್ರಮುಖ ಕಾರಣ ಟ್ರ್ಯಾಕ್ಟರ್‌ಗಳಂತೆ ಮಣ್ಣು ಕೆದಕಿ, ಗುಂಡಿ ಮಾಡುವುದಾಗಿದೆ. ಅಪಾರ ಪ್ರಮಾಣದ ಪ್ರದೇಶದಲ್ಲಿ ಹೀಗೆ ಮಣ್ಣನ್ನು ಕೆದಕುವುದರಿಂದ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ಧಾರೆ. ಮಣ್ಣಿನ ಅಡಿದಲ್ಲಿ ದೊಡ್ಡ ಪ್ರಮಾಣದ ಇಂಗಾಲದ ಡೈಆಕ್ಸೈಡ್‌ ಶೇಖರಗೊಂಡಿರುತ್ತದೆ. ಹಂದಿಗಳು ಕೋರೆಗಳಿಂದ ಗುಂಡಿ ಹೊಡೆದಾಗ ಬಿಡುಗಡೆಯಾಗುವ ಅಲ್ಪ ಪ್ರಮಾಣದ ಇಂಗಾಲದ ಡೈಆಕ್ಸೈಡ್‌ ಕೂಡ ಪರಿಸರದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರಾದ ಕ್ರಿಸ್ಟೋಫರ್‌ ಜೆ ಒಬ್ರಯನ್‌, ಈವ್‌ ಮೆಕ್‌ಡೊನಾಲ್ಡ್‌-ಮ್ಯಾಡನ್‌, ಜಿಮ್‌ ಹೋನ್‌, ಮ್ಯಾಥ್ಯೂ ಎಚ್‌ ಹೋಲ್ಡನ್‌, ನಿಕೋಲಸ್‌ ಆರ್‌ ಪ್ಯಾಟನ್‌ ನಡೆಸಿದ ಸಂವಾದದಲ್ಲಿ ತಿಳಿಸಿದೆ.

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ವಿಸ್ತರಿಸಿಕೊಳ್ಳುತ್ತಿರುವ ಸಸ್ತನಿಗಳ ಪೈಕಿ ಕಾಡು ಹಂದಿ ಒಂದಾಗಿದೆ. ಮೊದಲು ಕೇವಲ ಯುರೋಪ್‌ ಮತ್ತು ಏಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡು ಹಂದಿಗಳು ಕಾಣಸಿಗುತ್ತಿದ್ದವು. ಆದರೆ ಈಗ ಅಂಟಾರ್ಟಿಕಾ ಒಂದು ಬಿಟ್ಟು ಬೇರೆಲ್ಲ ಖಂಡಗಳಲ್ಲೂ ಕಾಡು ಹಂದಿಗಳು ವಿಸ್ತರಿಸಿಕೊಂಡಿವೆ. ಬರೀ ಆಸ್ಟ್ರೇಲಿಯಾ ಒಂದರಲ್ಲೇ 30 ಲಕ್ಷ ಕಾಡು ಹಂದಿಗಳಿವೆ ಎನ್ನಲಾಗಿದೆ.

ಇನ್ನೂ ಈ ಹಂದಿಗಳು ಆಸ್ಟ್ರೇಲಿಯಾದ ನೆಲ ಕಪ್ಪೆಗಳು ಹಾಗೂ ಮರ ಕಪ್ಪೆಗಳ ಆಹಾರ ಹಾಗೂ ವಾಸಸ್ಥಾನಗಳನ್ನು ನಾಶಪಡಿಸುತ್ತಿವೆ. ಕಾಡು ಹಂದಿಗಳ ಸಂತತಿ ವಿಪರೀತ ಹೆಚ್ಚಾದಂತೆ ಪ್ರಾಕೃತಿಕ ಅಸಮಾತೋಲನಕ್ಕೆ ಕಾರಣವಾಗುತ್ತದೆ. ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಕಾಡು ಹಂದಿಗಳು ಪ್ರತಿವರ್ಷ 36,214 ರಿಂದ 1,23,517 ಚದರ ಕಿ.ಮೀಗಳಷ್ಟು ಪ್ರದೇಶದ ನೆಲವನ್ನು ಅಗೆದು ಹಾಕುತ್ತವೆ. ಇದು ತೈವಾನ್‌ ನಿಂದ ಇಂಗ್ಲೆಂಡ್‌ನಷ್ಟು ಭೂಪ್ರದೇಶವಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd