ತಾತ್ಕಾಲಿಕವಾಗಿ ಮತ್ತೆ ಟೆಕ್ಸಾಸ್ ಕಾನೂನು ಮರುಸ್ಥಾಪಿಸಿದ ಯುಎಸ್ ನ್ಯಾಯಾಲಯ
ಇತ್ತೀಚೆಗೆ ಅಮೆರಿಕಾದ ವಿವಾದಾತ್ಮಕ ಟೆಕ್ಸಾಸ್ ಕಾನೂನಿಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ಆದ್ರೀಗ ಟೆಕ್ಸಾಸ್ನ ಗರ್ಭಪಾತದ ಮೇಲಿನ ಸಂಪೂರ್ಣ ನಿಷೇಧವನ್ನು ಅಮೆರಿಕದ ಮೇಲ್ಮನವಿಗೆ ಸಂಬಂಧಿಸಿದ ಉನ್ನತ ನ್ಯಾಯಾಲಯವು ತಾತ್ಕಾಲಿಕವಾಗಿ ಮರು ಸ್ಥಾಪಿಸಿದೆ. ಟೆಕ್ಸಾಸ್ನ ಗರ್ಭಪಾತದ ಮೇಲಿನ ಸಂಪೂರ್ಣ ನಿಷೇಧವನ್ನು ಅಮೆರಿಕದ ಮೇಲ್ಮನವಿಗೆ ಸಂಬಂಧಿಸಿದ ಉನ್ನತ ನ್ಯಾಯಾಲಯವು ತಾತ್ಕಾಲಿಕವಾಗಿ ಮರು ಸ್ಥಾಪಿಸಿದೆ.
ಗರ್ಭಪಾತದ ಮೇಲಿನ ನಿಷೇಧವನ್ನು ತೆಗೆದು ಹಾಕುವ ಅಕ್ಟೋಬರ್ 6ರ ಕೆಳ ನ್ಯಾಯಾಲಯದ ಆದೇಶಕ್ಕೆ ಆಡಳಿತಾತ್ಮಕ ತಡೆ ನೀಡುತ್ತಿರುವುದಾಗಿ ಉನ್ನತ ನ್ಯಾಯಾಲಯ ಹೇಳಿದೆ. ಅದಾಗ್ಯೂ ಆಡಳಿತಾತ್ಮಕ ತಡೆಯಾಜ್ಞೆಯ ಉದ್ದೇಶ , ಗರ್ಭಪಾತ ಹಕ್ಕುಗಳಿಗೆ ಸಂಬಂಧಿಸಿದಂತೆ ಶಾಶ್ವತ ಆದೇಶ ಜಾರಿಗೆ ನ್ಯಾಯಾಲಯಕ್ಕೆ ಹೆಚ್ಚು ಸಮಯ ನೀಡುವುದಾಗಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದ ಟೆಕ್ಸಾಸ್ ಗರ್ಭಪಾತ ಕಾನೂನು, ಗರ್ಭಧಾರಣೆಯ 6 ವಾರಗಳ ನಂತರ ಗರ್ಭಪಾತವನ್ನು ನಿಷೇಧಿಸುತ್ತದೆ. ಅತ್ಯಾಚಾರ ಅಥವಾ ಸಂಭೋಗದಿಂದ ಉಂಟಾಗುವ ಗರ್ಭಧಾರಣೆಗೆ ಕಾನೂನು ಯಾವುದೇ ವಿನಾಯಿತಿ ನೀಡುವುದಿಲ್ಲ.
ಭ್ರೂಣದ ಹೃದಯ ಚಟುವಟಿಕೆಯನ್ನು ಪತ್ತೆಹಚ್ಚಿದ ನಂತರ ಗರ್ಭಪಾತಕ್ಕೆ ಸಹಾಯ ಮಾಡಿದ ಯಾರನ್ನಾದರೂ ಗುರುತಿಸಿ ಮೊಕದ್ದಮೆ ಹೂಡಿದರೆ ಅವರಿಗೆ ಕನಿಷ್ಠ 10000 ಡಾಲರ್ ಬಹುಮಾನ ನೀಡುವ ಮೂಲಕ ಯಶಸ್ವಿಯಾಗಿ ನಿಷೇಧ ಜಾರಿಗೊಳಿಸಲು ಈ ಕಾನೂನು ಅವಕಾಶ ನೀಡುತ್ತದೆ. ಈ ಕಾನೂನಿನ ವಿರುದ್ಧ ಮಹಿಳೆಯರು ಹೋರಾಟ ನಡೆಸಿ ಕಾನೂನು ರದ್ದುಉ ಮಾಡುವಂತೆ ಆಗ್ರಹಿಸಿದ್ದರು.