ಜೈಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣಾ (Rajasthan Election) ಕಣ ರಂಗೇರಿದ್ದು, ಪ್ರಚಾರಕ್ಕೆ ತೆರಳಿದ್ದ ಅಮಿತ್ ಶಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿಯ ನಾಗೌರ್ನಲ್ಲಿ ಅಮಿತ್ ಶಾ ರಥದಲ್ಲಿ (Chariot) ನಿಂತು ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ರಥದ ಮೇಲಿನ ಭಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಆಗ ಕಿಡಿ ಹೊತ್ತಿಕೊಂಡಿದೆ. ಕೂಡಲೇ ಇನ್ನಿತರ ವಾಹುಗಳನ್ನು ಕೂಡಲೇ ನಿಲ್ಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಎರಡೂ ಬದಿಗಳಲ್ಲಿ ಅಂಗಡಿಗಳು ಮತ್ತು ಮನೆಗಳಿರುವ ಸಾಲಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಆ ನಂತರ ಶಾ ಅವರು ಮತ್ತೊಂದು ವಾಹನದ ಮೂಲಕ ಪರ್ಬತ್ಸರ್ಗೆ ತೆರಳಿ ಮಾತನಾಡಿದರು. ರಾಜಸ್ಥಾನದಲ್ಲಿ ನ. 25ರಂದು ಚುನಾವಣೆ ನಡೆಯಲಿದ್ದು, ಡಿ. 5ರಂದು ಮತ ಎಣಿಕೆ ನಡೆಯಲಿದೆ.