ಬೆಂಗಳೂರು: ಶ್ರೀಮಂತರ ಸೋಗಿನಲ್ಲಿ ಬಂದು ಚಿನ್ನ ಖರೀದಿಸಿ ವಂಚಿಸುತ್ತಿದ್ದ ಖತರ್ನಾಕ್ ಜೋಡಿಯೊಂದನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶ್ರೀಮಂತರಂತೆ ಟಿಪ್‌ಟಾಪ್ ಆಗಿ ಚಿನ್ನದ ಅಂಗಡಿಗೆ ಬಂದಿದ್ದ ಜೋಡಿ ಚಿನ್ನ ಖರೀದಿಸುವುದರಲ್ಲಿ ತುಂಬಾ ಬ್ಯೂಸಿಯಾಗಿರುತ್ತಿದ್ದರು. ಒಳ್ಳೆಯ ವ್ಯಾಪಾರ ಆಗ್ತಿತ್ತು ಅಂದುಕೊಳ್ಳುತ್ತಿದ್ದ ಚಿನ್ನದಂಗಡಿ ಮಾಲೀಕನ ಖುಷಿ ಇರುತ್ತಿದ್ದದ್ದು ಕೇವಲ ಅರ್ಧಗಂಟೆ ಮಾತ್ರ. ಡಿಜಿಟಲ್ ಪೇಮೆಂಟ್ ಆ್ಯಪ್‌ಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈ ಜೋಡಿ, ಫೇಕ್ ಪೇಮೆಂಟ್ ಆ್ಯಪ್ ಮೂಲಕ ಹಣ ಪಾವತಿ ಮಾಡಿರುವುದಾಗಿ ತೋರಿಸಿ, ವಂಚಿಸುತ್ತಿದ್ದರು.
ಬ್ಯಾಡರಹಳ್ಳಿ ವ್ಯಾಪ್ತಿಯ ಆಭರಣದ ಅಂಗಡಿಯಲ್ಲೂ ಅದೇ ರೀತಿ ನಾಟಕ ಮಾಡಿ ಎಸ್ಕೇಪ್ ಆಗಿದ್ದರು. 15 ದಿನಗಳ ನಂತರ ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.