ಬುಡಕಟ್ಟು ಜನರಿಗೆ ವಂಚಿಸಿ ಹಣ ಪಡೆಯುತ್ತಿದ್ದ ಜ್ಯೋತಿಷಿ Saaksha Tv
ಕೇರಳ: ಜ್ಯೋತಿಷಿಯೊಬ್ಬ ಆದಿವಾಸಿ ಮಕ್ಕಳನ್ನು ದೇವರೆಂದು ಘೋಷಣೆ ಮಾಡಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಘಟನೆ ಕೇರಳದ ವಯನಾಡ್ ನಲ್ಲಿ ನಡೆದಿದೆ.
ಈ ಜ್ಯೋತಿಷಿ ಪ್ರತಿ ಮಗುವಿಗೆ ರೂ. 15,000 ರಿಂದ ರೂ. 25,000 ರೂ.ಗಳನ್ನು ಪಡೆದು ದೇವರೆಂದು ಘೋಷಣೆ ಮಾಡುತ್ತಿದ್ದ. ದುರಂತ ಎಂದರೆ ದೇವರೆಂದು ಘೋಷಣೆ ಮಾಡಿದ ಮೇಲೆ ಮಕ್ಕಳು ಎಲ್ಲೂ ಹೋಗುವಂತಿರಲಿಲ್ಲ. ಪರಿಣಾಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.
ಈ ಪ್ರಕರಣವು 10ನೇ ತರಗತಿಯ ಬಾಲಕಿ ಶಾಲೆಗೆ ಗೈರುಹಾಜರಾಗಿರುವ ಬಗ್ಗೆ ವಿಚಾರಿಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಮೂಢನಂಬಿಕೆಯಿಂದಾಗಿ ತಿರುನೆಲ್ಲಿ ಪಂಚಾಯಿತಿಯೊಂದರಲ್ಲೇ ಸುಮಾರು 25 ಮಕ್ಕಳ ಶಿಕ್ಷಣ ಸ್ಥಗಿತಗೊಂಡಿರುವುದು ಅಧಿಕಾರಿಗಳಿಗೆ ತಿಳದಿದೆ.
ಈ ಸಂಭಂದ ವಂಚನೆ ಮತ್ತು ಮಕ್ಕಳ ಹಕ್ಕುಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಾಗಿದೆ. ಘಟನೆ ಸಂಬಂಧ ಕೇರಳ ಪೊಲೀಸರು ಮತ್ತು ಮಕ್ಕಳ ಹಕ್ಕುಗಳ ಆಯೋಗ ತನಿಖೆ ಆರಂಭಿಸಿದೆ.
ಈ ಕಿರಾತಕ ಜ್ಯೋತಿಷಿಯು ಮಕ್ಕಳಲ್ಲಿ ವಿಶೇಷ ಶಕ್ತಿಯಿದೆ ಎಂದು ಬುಡಕಟ್ಟು ಜನಾಂಗದವರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತಿದ್ದನಂತೆ. ಪೊಲೀಸರು ಈ ಕುರಿತು ವಿಸ್ತೃತ ತನಿಖೆ ಆರಂಭಿಸಿದ್ದು, ಈ ಭಾಗದಿಂದ ಶಾಲೆ ಬಿಟ್ಟ ಮಕ್ಕಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.








