ಕೌಟುಂಬಿಕ ಕಲಹ – ಮಗುವನ್ನ ನೀರಿನಲ್ಲಿ ಮುಳುಗಿಸಿ ತಾಯಿಯು ಆತ್ಮಹತ್ಯೆ…
ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ಹೆತ್ತ ಮಗುವನ್ನಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 2 ವರ್ಷದ ಮಗು ಮೋಕ್ಷಿತ್ ನನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ. ಬಳಿಕ ತಾಯಿ ಅನ್ನಪೂರ್ಣ ನೇಣಿಗೆ ಶರಣಾಗಿದ್ದಾರೆ. ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ 22 ವರ್ಷದ ಮೃತ ವಿವಾಹಿತ ಮಹಿಳೆ ಹಾಗೂ ಮೋಕ್ಷಿತ್ 2ವರ್ಷದ ಗಂಡು ಮಗು ಸಾವು.
ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳ ಲಾಗಿದೆ ಎಂದು ಸ್ಥಳೀಯರ ಆರೋಪ, ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದಿಂದ 2 ವರ್ಷಗಳ ಹಿಂದೆ ವಿವಾಹವಾಗಿದ್ದ ಮೃತ ಮಹಿಳೆ ಅನ್ನಪೂರ್ಣ. ಕೌಟುಂಬಿಕ ಕಲಹಕ್ಕೆ ಬೇಸತ್ತು ನೀರಿನ ತೊಟ್ಟಿಗೆ 2ವರ್ಷದ ಮಗುವನ್ನು ಮುಳುಗಿಸಿ ಕೊಲೆ ಮಾಡಿ ತಾನು ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೊಡ್ಡಕವಲಂದೆ ಪಿ ಎಸ್ ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾದ ಬಳಿಕ ಮೃತ ಮಹಿಳೆ ಅನ್ನಪೂರ್ಣ ಮತ್ತು 2ವರ್ಷದ ಗಂಡು ಮಗು ಮೋಕ್ಷಿತಾ ಶವವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ದಾಖಲು ಮಾಡಲಾಗಿದೆ.