ಸಿ ಎಂ ನಿದ್ದೆಗೆಡಿಸಿದ ಹಾನಗಲ್ ಆಂತರಿಕಾ ಸಮೀಕ್ಷೆ
ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ಆಂತರಿಕ ಸಮೀಕ್ಷೆ ಬಿಜೆಪಿ ಪಾಳಯಕ್ಕೆ ತಲೆಬಿಸಿ ತಂದೊಡ್ಡಿದೆ. ಎರಡು ಕ್ಷೇತ್ರಗಳಲ್ಲಿ ನೆಕ್ ಟೂ ನೆಕ್ ಫೈಟ್ ಕಾಣುತ್ತಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿ ಎಂ ಸಿಲುಕಿದ್ದಾರೆ. ಬಸವರಾಜ್ ಬೊಮ್ಮಾಯಿ ಸಿ ಎಂ ಆದ ನಂತರದ ಮೊದಲ ಉಪಚುನಾವಣೆ ಇದಾಗಿದ್ದು ಶತಯಾ ಗತಾಯ ಗೆಲ್ಲಲೇ ಬೇಕೆಂದು ಸಿ ಎಂ ಎಲೆಕ್ಷನ್ ಅಖಾಡದಲ್ಲಿ ಬೆವರು ಹರಿಸುತ್ತಿದ್ದಾರೆ.
ಆಂತರಿಕ ಸಮೀಕ್ಷೆ ಹೊರಬಂದ ನಂತರ ರಣತಂತ್ರವನ್ನ ಬದಲಿಸಿರುವ ಬಿಜೆಪಿ ಮತ್ತೆ ಯಡಿಯೂರಪ್ಪರ ಕಡೆ ಹೊರಳಿದೆ..ಜೊತೆಗೆ ಮಠ ಮಾನ್ಯಗಳ ಬೇಟಿಯನ್ನ ಹೆಚ್ಚು ಮಾಡುತ್ತಿದೆ. ಸಿಂದಗಿ ಶಿಕಾರಿಗಾಗಿ ವಿಜಯೇಂದ್ರ ಕ್ಷೇತ್ರದಲ್ಲೆ ಬೀಡುಬಿಟ್ಟಿದ್ದಾರೆ.
ಹಾನಗಲ್ ನಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ನಡುವೇ ನೇರ ಹಣಾಹಣೀ ಏರ್ಪಟ್ಟಿದ್ದೂ ಲೆಕ್ಕಚಾರಗಳು ಉಲ್ಟಾ ಆಗುವ ಮುನ್ಸೂಚನೆ ದೊರಕುತ್ತಿದ್ದಂತೆ ಬಿಜೆಪಿಯ ಹಲವು ನಾಯಕರು ಮಠ ಮಾನ್ಯಗಳ ಕಡೆ ಕಣ್ಣಿಟ್ಟಿದ್ದು ಪದೇ ಪದೇ ಬೇಟಿ ನೀಡುತ್ತಿದ್ದಾರೆ.
ಈ ಉಪಚುನಾವಣೆಯ ರಾಜಕೀಯರ ನಾಯಕರ ಮಾತಿನ ವಾಕ್ಸಮರಕ್ಕೆ ವೇದಿಕೆಯಾಗಿದ್ದಂತೂ ಸತ್ಯ. ಕೆಲವು ನಾಯಕರ ವಿರುದ್ಧ ವೈಯಕ್ತಿಕ ಜೀವನದ ಬಗ್ಗೆಯು ಕಟು ಹೇಳಿಕೆಗಳು ಕೇಳಿ ಬಂದವು…
ಹಣ ಹಂಚಿದ ಅನುಭವದ ಮೇಲೆ ನಮ್ಮ ಮೇಲೆ ಆರೋಪ : ಸಿದ್ದುಗೆ ಸಿಎಂ ಟಾಂಗ್