UPI payments : ಇಂಟರ್ ನೆಟ್ ಇಲ್ಲದೆಯೂ ಹಣ ವರ್ಗಾವಣೆ – ಬಂದಿದೆ UPI123Pay
UPI ಮೂಲಕ ಹಣ ಪಾವತಿ ಮಾಡಲು ಇನ್ನು ಮುಂದೆ ಇಂಟರ್ ನೆಟ್ ನ ಅವಶ್ಯಕತೆ ಬೀಳುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದೇಶದ ಸಾವಿರಾರು ಫೀಚರ್ ಫೋನ್ ಬಳಕೆದಾರರನ್ನು ಡಿಜಿಟಲ್ ಪಾವತಿ ಪರಿಸರಕ್ಕೆ ಸೇರಿಸಲು UPI123Pay ಅನ್ನ ಪ್ರಾರಂಭಿಸುತ್ತಿದೆ. ಇದರ ಮೂಲಕ ಇಂಟರ್ ನೆಟ್ ವ್ಯವಸ್ಥೆ ಇಲ್ಲದೆಯೂ ಸಾಮಾನ್ಯ ಫೀಚರ್ ಫೋನ್ ಗಳ ಮೂಲಕ ಹಣ ಪಾವತಿ ಮಾಡಬಹುದು, ಮತ್ತು ಇದು ಹಣದ ವಹಿವಟು ವಿಧಾನಗಳನ್ನ ಸುಲಭಗೊಳಿಸುತ್ತದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಇಂಟರ್‌ನೆಟ್ ಇಲ್ಲದೆ ಯುಪಿಐ ಬಳಸುವ ಕುರಿತು ತಮ್ಮ ಚೊಚ್ಚಲ ಭಾಷಣದಲ್ಲಿ ಮಾತನಾಡಿ ಹಣಕಾಸು ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಚಿಲ್ಲರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಲು ವಿಶೇಷವಾಗಿ ಸ್ಮಾರ್ಟ್ ಪೋನ್ ಅಲ್ಲದ ಫೀಚರ್ ಫೋನ್ ಬಳಸುವ ಬಳೆಕೆದಾರರಿಗಾಗಿ UPI ಆಧಾರಿತ ಪಾವತಿ ಸೇವೆ ಪ್ರಾರಂಭಿಸುವುದಾಗಿ ಪ್ರಸ್ತಾಪಿಸಿದ್ದರು. ಇದಕ್ಕಾಗಿ ಸಾಮಾನ್ಯ ಸರ್ವರ್ ಸೈಟ್ ಲೈಬ್ರರಿಯನ್ನ ಅಭಿವೃದ್ಧಿಪಡಿಸಲಾಗಿದೆ.
ಕಾಲ್ ಮಾಡುವುದು ಆಯ್ಕೆಮಾಡುವುದು ಮತ್ತು ಪಾವತಿ ಒಟ್ಟು ಮೂರು ಹಂತಗಳನ್ನ ಒಳಗೊಂಡಿದೆ. ಇದಕ್ಕೆ UPI123Pay ಎಂದು ಕೆರಯಲಾಗುತ್ತದೆ. ಇದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿರುವ ಸಂಖ್ಯೆಯನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು. ಡೆಬಿಟ್ ಕಾರ್ಡ್ ಬಳಸಿ UPI ಪಿನ್ ಸೆಟ್ ಮಾಡಿಕೊಳ್ಳಬೇಕು.
ನಂತರ ಹಣ ಕಳುಹಿಸಲು ಇಂಟರ್ ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಂಖ್ಯೆಯನ್ನ ಡಯಲ್ ಮಾಡಬೇಕು ಪೋನ್ ನಂಬರ್ ಸೆಲೆಕ್ಟ್ ಮಾಡಿದ ನಂತರ ಹಣವನ್ನ ನಮೂದಿಸಬೇಕು ಆನಂತರ UPI ಪಿನ್ ನಮೂದಿಸಿ ಮಿಸ್ ಕಾಲ್ಡ್ ನೀಡಬೇಕು ಈ ಮೂಲಕ ಹಣವನ್ನ ಪಾವತಿಸಬಹುದು. ಇದಲ್ಲದೇ ಆ್ಯಪ್ ಆಧಾರಿತ ಪೇಮೆಂಟ್ ಅಥವಾ ಧ್ವನಿ ಆಧಾರಿತ ತಂತ್ರಜ್ಞಾನವನ್ನು ಬಳಸಬಹುದು.
RBI ವರದಿಯ ಪ್ರಕಾರ UPI123Pay ಮಾಡಲು ನಾಲ್ಕು ಆಯ್ಕೆಯನ್ನ ನೀಡುತ್ತದೆ
1- ಅಪ್ಲಿಕೇಶನ್‌ಗಳ,
2-ಮಿಸ್ಡ್ ಕಾಲ್:
3- ಇಂಟರ್-ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR)
4- ಸಮೀಪದ ಧ್ವನಿ ಆಧಾರಿತ ಪಾವತಿ ಎನ್ನುವ ನಾಲ್ಕು ಪಾವತಿಯನ್ನ ಶೀಘ್ರವೇ ಜನರಿಗಾಗಿ ಪ್ರಾರಂಭಿಸುತ್ತಿದೆ.
An internet link is no longer a prerequisite for making UPI payments ?