ಯಾದಗಿರಿ: ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ, ಇದರಿಂದ ಹಲವಾರು ತೊಂದರೆಗಳಾಗುತ್ತಿರುವುದು ಬೆಳಕಿಗೆ ಬರುತ್ತಲೇ ಇವೆ. ಸದ್ಯ ಮಹಿಳಾ ಪ್ರಯಾಣಿಕರು, ವೃದ್ಧ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸೀಟ್ ಗಾಗಿ ವಯೋವೃದ್ಧನ ಮೇಲೆ ನಾಲ್ವರು ಮಹಿಳೆಯರು ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಯಾದಗಿರಿಯಿಂದ ಸೇಡಂಗೆ ಹೊರಟ್ಟಿದ್ದ ಬಸ್ನಲ್ಲಿಯೇ ಈ ಘಟನೆ ನಡೆದಿದೆ. ಬಸ್ನಲ್ಲಿ ಕುಳಿತಿದ್ದ ವೃದ್ಧರಿಗೆ ಬಸ್ ಏರಿದ ನಾಲ್ವರು ಮಹಿಳೆಯರು ಸೀಟ್ ಬಿಡುವಂತೆ ಕೇಳಿದ್ದಾರೆ. ಮುಂದಿನ ಸೀಟ್ಗಳು ಖಾಲಿ ಇವೆ, ಅಲ್ಲಿ ಕುಳಿತುಕೊಳ್ಳಿ ಎಂದಿದ್ದಾರೆ. ಆಗ ಮಹಿಳೆಯರು ವಯೋವೃದ್ಧನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆ ಕುರಿತು ಇತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು, ಮಹಿಳೆಯರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.