ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ.
ಮಂಗಳವಾರ ಇಂಡೋನೇಷ್ಯಾದ ಫೂರ್ವ ಪ್ರಾಂತ್ಯದ ಸಾಗರದ ಆಳದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಇಲಾಖೆಯು ಸುನಾಮಿ ಎಚ್ಚರಿಕೆಯನ್ನು ನೀಡಿದೆ.
ಮಂಗಳವಾರ ಮಧ್ಯಾಹ್ನ 3:20ರ ಸುಮಾರಿಗೆ ಮೌಮೆರೆಯಿಂದ ಉತ್ತರಕ್ಕೆ 95 ಕಿ.ಮೀ ದೂರದಲ್ಲಿ 5 ಕಿ ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ತೋರಿಸಿದೆ. 7.5 ರಷ್ಟು ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ ಎಂದು ಇಂಡೋನೇಷಿಯಾದ ಅಧಿಕಾರಿಗಳು ಅಂದಾಜಿಸಿದ್ದಾರೆ, ಇದು ಫ್ಲೋರ್ಸ್ ಸಮುದ್ರದ ಪೂರ್ವಭಾಗ, ನುಸಾ ಟೆಂಗರಾ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಈಗಾಗಿ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
https://twitter.com/i/status/1470611021576474627
ಅಮೇರಿಕಾ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರದ ಪ್ರಕಾರ ಭೂಕಂಪದ ಕೇಂದ್ರ ಬಿಂದುವಿನಿಂದ 1,000 ಕಿಮೀ ವ್ಯಾಪ್ತಿಯಲ್ಲಿರುವ ಕರಾವಳಿ ಪ್ರದೇಶಗಳಲ್ಲಿ “ಅಪಾಯಕಾರಿ” ಸುನಾಮಿ ಅಲೆಗಳು ಅಪ್ಪಳಿಸಬಹುದು ಎಂದು ಎಚ್ಚರಿಸಿದೆ.
ಇದು ಸಮುದ್ರದೊಳಗಿನ ಭೂಕಂಪವಾಗಿರು ಕಾರಣ ಸಾವು ನೋವುಗಳ ಸಾಧ್ಯತೆಗಳು ಕಡಿಮೆ ಇದೆ. ಆದರೆ ಇದು ಸುನಾಮಿಗಳು ಮತ್ತು ಭೂಕುಸಿತಗಳಂತಹ ಅಪಾಯಗಳನ್ನ ,ಉಂಟುಮಾಡಬಹುದು ಎಂದು ಅಂಧಾಜಿಸಲಾಗಿದೆ.








