ಬೆಂಗಳೂರಿನಿಂದ ಗಂಡಿಕೋಟಗೆ ವಿಶೇಷ ಟೂರ್ ಪ್ಯಾಕೇಜ್ ಬಿಡುಗಡೆ
ಆಂದ್ರ ಪ್ರದೇಶ ಟೂರಿಸಂ ಕಡೆಯಿಂದ ಗಂಡಿಕೋಟ ಕೋಟೆಗೆ ಬೆಂಗಳೂರಿನಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ವಾರಂತ್ಯಕ್ಕೆ ಎರಡು ದಿನದ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದ್ದು ವಿಶೇಷ ಪ್ಯಾಕೇಜ್ ಊಟ, ವಸತಿ ಸೌಲಭ್ಯ ಹೊಂದಿದೆ.
ಬೆಂಗಳೂರಿನಲ್ಲಿ ನಿನ್ನೆ ಗೋಲ್ಡ್ ಪಿಂಚ್ ಹೋಟೆಲಿನಲ್ಲಿ ಗಂಡಿಕೋಟ ವಿಶೇಷ ಪ್ಯಾಕೇಜ್ ಬಗ್ಗೆ ಸುದ್ದಿ ಗೋಷ್ಟಿ ನಡೆಸಿದ ಆಂದ್ರಪ್ರದೇಶ ಟೂರಿಸಂ ಕಾರ್ಪೋರೇಶನ ಡಿವಿಜನಲ್ ಮ್ಯಾನೇಜರ್ ಗಿರಿಧರ್ ರೆಡ್ಡಿ ಈ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸುಗಮಾ ಟೂರಿಸ್ಟ್ ನ ಮಾಲೀಕರಾದ ಆಯುಶ್ ಜೈನ್ ,ವ್ಯವಸ್ಥಾಪಕರಾದ ಜಗದೀಶ್ ಉಪಸ್ಥಿತರಿದ್ದರು.
ಗಂಡಿಕೋಟ ಕೋಟೆಯ ವಿಶೇಷತೆಗಳು
ಗಂಡಿಕೋಟ ಆಂದ್ರ ಪ್ರದೇಶದ ಬಹುದೊಡ್ಡ ಪ್ರವಾಸಿ ಕೇಂದ್ರವಾಗಿದೆ.ಇಲ್ಲಿ ಹಲವಾರು ಪ್ರವಾಸಿ ಕೇಂದ್ರಗಳಿದ್ದು ಪ್ರಮುಖವಾಗಿ 15 ನೇ ಶತಮಾನದಲ್ಲಿ ನಿರ್ಮಾಣವಾದ ಇತಿಹಾಸ ಪ್ರಸಿದ್ದ ಮಾಧವರಾಯ ದೇವಸ್ಥಾನ, ರಂಗನಾಥ ಸ್ವಾಮಿ ದೇವಸ್ಥಾನ ಹಲವರು ಪ್ರವಾಸಿಗರನ್ನು ಸೆಳೆಯುತ್ತಿದೆ. ವಿಜಯನಗರ ಕಾಲದ ಕಲೆ ಮತ್ತು ವಾಸ್ತುಶಿಲ್ಪವನ್ನು ಹೊಂದಿದ್ದು ಆಕರ್ಷಣಿಯವಾಗಿದೆ.
ಹಾಗೇ ಜಾಮೀಯಾ ಮಸೀದಿ, ಪಿಜನ್ ಟವರ್ ಕೂಡ ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದೆ. ಗಂಡಿಕೋಟ ಕೋಟೆ ಯು ನೈಸರ್ಗಿಕ ವೈವಿಧ್ಯತೆಯಿಂದ ಕೂಡಿದ್ದು ಕೋಟೆಯಿಂದ ಕಣಿವೆ ಮತ್ತು ಕಾಡಿನ ಸೌಧರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.