ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಲೈಫ್ ಟೈಮ್ ಟೋಲ್ ಪಾಸ್‌ಗಳ ಸೌಲಭ್ಯ ನೀಡಲು ತೀರ್ಮಾನಿಸಿದೆ. 3000 ರೂ.ಗಳಿಗೆ ವಾರ್ಷಿಕ ಟೋಲ್ ಪಾಸ್ ಮತ್ತು 30,000 ರೂ.ಗಳಿಗೆ 15 ವರ್ಷಗಳ ವ್ಯಾಲಿಡಿಟಿಯ ಲೈಫ್ ಟೈಮ್ ಟೋಲ್ ಪಾಸ್ ಪರಿಚಯವಾಗುವ ಸಾಧ್ಯತೆಯಿದೆ.
ಈ ಯೋಜನೆಯೊಂದಿಗೆ ಪ್ರಯಾಣಿಕರಿಗೆ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ಸಮಯ ಮತ್ತು ಖರ್ಚು ಎರಡೂ ಕಡಿಮೆಯಾಗುವ ಮೂಲಕ ನೇರ ಪ್ರಯೋಜನ ಸಿಗಲಿದೆ. ಈ ಹೊಸ ವ್ಯವಸ್ಥೆಯು ಫಾಸ್ಟ್‌ಟ್ಯಾಗ್‌ಗೂ ಲಿಂಕ್ ಆಗಲಿದೆ, ಅಂದರೆ ಹೊಸ ಕಾರ್ಡ್‌ಗಳನ್ನು ಖರೀದಿಸುವ ಅಗತ್ಯವಿಲ್ಲ. ಪ್ರಸ್ತುತ, ಪ್ರತಿಯೊಂದು ಟೋಲ್ ಗೇಟ್‌ನಲ್ಲಿ ಟೋಲ್ ಪಾವತಿಸಿದ ನಂತರವೇ ಮುಂದುವರಿಯುವ ವ್ಯವಸ್ಥೆಯಿದೆ. ಆದರೆ ಹೊಸ ಪಾಸ್ ಯೋಜನೆಯು ಎಲ್ಲ ವಾಹನ ಚಾಲಕರಿಗೆ ನೆಮ್ಮದಿ ನೀಡಲಿದ್ದು, ವಾಹನ ದಟ್ಟಣೆಯ ಸಮಸ್ಯೆಗೂ ಪರಿಹಾರ ನೀಡುವ ನಿರೀಕ್ಷೆಯಿದೆ.
ಈ ಪ್ರಸ್ತಾಪ ಈಗಾಗಲೇ ರಸ್ತೆ ಸಾರಿಗೆ ಸಚಿವಾಲಯದ ಅಂತಿಮ ಹಂತದಲ್ಲಿದ್ದು, ಪ್ರತಿ ಕಿಲೋಮೀಟರ್‌ಗೆ ಟೋಲ್ ದರ ಕಡಿಮೆ ಮಾಡುವ ಬಗ್ಗೆ ಕೂಡ ಚಿಂತನೆ ನಡೆಯುತ್ತಿದೆ. ಈ ಹೊಸ ವ್ಯವಸ್ಥೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲಕರವಾಗಲಿದ್ದು, ಭವಿಷ್ಯದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಸಹಾಯಕವಾಗಲಿದೆ.








