ಚೀನಾದಲ್ಲಿ ಮತ್ತೊಂದು ಹರಡುವ ವೈರಸ್- ಏಳು ಮಂದಿ ಸಾವು, 60 ಮಂದಿಗೆ ಸೋಂಕು
ಬೀಜಿಂಗ್, ಅಗಸ್ಟ್ 6: ಜಗತ್ತು ಕೋವಿಡ್-19 ಸೋಂಕನ್ನು ತಡೆಗಟ್ಟಲು ಸಾಧ್ಯವಾಗದೆ ತತ್ತರಿಸಿರುವ ಈ ಸಮಯದಲ್ಲಿ ಮತ್ತೊಂದು ಮಾರಿ ಚೀನಾದಲ್ಲಿ ಕಾಣಿಸಿಕೊಂಡಿದೆ. ಟಿಕ್ ಎನ್ನುವ ವೈರಸ್ ಸೋಂಕು ಚೀನಾದಲ್ಲಿ ಹರಡುತ್ತಿದ್ದು, ಈಗಾಗಲೇ ಏಳು ಮಂದಿಯನ್ನು ಬಲಿತೆಗೆದುಕೊಂಡಿದೆ. ಅಷ್ಟೇ ಅಲ್ಲ ಈಗಾಗಲೇ 60 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಚೀನಾದ ಅಧಿಕೃತ ಮಾಧ್ಯಮ ಹೊಸ ಸಾಂಕ್ರಾಮಿಕ ಕಾಯಿಲೆ ದೇಶದಲ್ಲಿ ಹರಡುತ್ತಿದ್ದು, ಟಿಕ್ ಎನ್ನುವ ಈ ವೈರಸ್ ಸೋಂಕು ಏಳು ಜನರನ್ನು ಬಲಿ ತೆಗೆದುಕೊಂಡಿದ್ದು, 60 ಜನರಿಗೆ ಸೋಂಕು ತಗುಲಿದೆ ಎಂದು ಬುಧವಾರ ವರದಿ ಮಾಡಿದೆ. ಜೊತೆಗೆ ಇದು ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ 37 ಕ್ಕೂ ಹೆಚ್ಚು ಜನರು ವರ್ಷದ ಮೊದಲಾರ್ಧದಲ್ಲಿ ಎಸ್ಎಫ್ಟಿಎಸ್ ವೈರಸ್ಗೆ ತುತ್ತಾದರು. ನಂತರ, ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ 23 ಜನರಿಗೆ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ವರದಿಗಳು ಉಲ್ಲೇಖಿಸಿದೆ.
ವೈರಸ್ನಿಂದ ಬಳಲುತ್ತಿದ್ದ ಜಿಯಾಂಗ್ಸು ರಾಜಧಾನಿಯಾದ ನಾನ್ಜಿಂಗ್ನ ಮಹಿಳೆಯೊಬ್ಬರು ಜ್ವರ, ಕೆಮ್ಮು ಮುಂತಾದ ರೋಗ ಲಕ್ಷಣಗಳನ್ನು ತೋರಿಸಿದಳು ಆಕೆಯ ದೇಹದ ಒಳಗಿನ ಲ್ಯುಕೋಸೈಟ್, ರಕ್ತದ ಪ್ಲೇಟ್ಲೆಟ್ ಕುಸಿತವನ್ನು ವೈದ್ಯರು ಕಂಡುಹಿಡಿದು ಒಂದು ತಿಂಗಳ ಚಿಕಿತ್ಸೆಯ ನಂತರ, ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ವೈರಸ್ನಿಂದಾಗಿ ಅನ್ಹುಯಿ ಮತ್ತು ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಎಸ್ಎಫ್ಟಿಎಸ್ ವೈರಸ್ ಹೊಸ ವೈರಸ್ ಅಲ್ಲ. ಚೀನಾವು 2011 ರಲ್ಲಿ ವೈರಸ್ನ ರೋಗಕಾರಕವನ್ನು ಪ್ರತ್ಯೇಕಿಸಿದೆ ಮತ್ತು ಇದು ಬುನ್ಯವೈರಸ್ ವರ್ಗಕ್ಕೆ ಸೇರಿದೆ.
ಉರಿಯೂತವು ಉಣ್ಣಿಗಳಿಂದ ಮನುಷ್ಯರಿಗೆ ಹರಡಿರಬಹುದು ಮತ್ತು ವೈರಸ್ ಮನುಷ್ಯರ ನಡುವೆ ಹರಡಿರಬಹುದು ಎಂದು ವೈರಾಲಜಿಸ್ಟ್ಗಳು ಹೇಳಿದ್ದಾರೆ. ಝೀಜಿಯಾಂಗಿ ವಿಶ್ವವಿದ್ಯಾಲಯದ ಮೊದಲ ಅಂಗಸಂಸ್ಥೆಯ ಆಸ್ಪತ್ರೆಯ ವೈದ್ಯ ಶೆಂಗ್ ಜಿಫಾಂಗ್, ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರೋಗಿಗಳು ರಕ್ತ ಅಥವಾ ಲೋಳೆಯ ಮೂಲಕ ವೈರಸ್ ಅನ್ನು ಇತರರಿಗೆ ರವಾನಿಸಬಹುದು ಎಂದು ಅವರು ಹೇಳಿದ್ದಾರೆ. ಟಿಕ್ ಬೈಟ್ ಪ್ರಮುಖ ಪ್ರಸರಣ ಮಾರ್ಗವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ, ಜನರು ಜಾಗರೂಕರಾಗಿ ಇದ್ದರೆ, ಅಂತಹ ವೈರಸ್ ಸೋಂಕಿನ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.