ಬಿಜೆಪಿಯ ಕಣ ಕಣದಲ್ಲೂ ದಲಿತ ವಿರೋಧಿ ಧೋರಣೆ : ಕಾಂಗ್ರೆಸ್ Congress
ಬೆಂಗಳೂರು : ಬಿಜೆಪಿಯ ಕಣ ಕಣದಲ್ಲೂ ದಲಿತ ವಿರೋಧಿ ಧೋರಣೆ ತುಂಬಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟಿಸಿದೆ.
ಕೋಟಾದ ಕೊರಗ ಜನಾಂಗದ ಮದುವೆ ಕಾರ್ಯಕ್ರಮಕ್ಕೆ ನುಗ್ಗಿ ಅಮಾನುಷವಾಗಿ ಲಾಠಿ ಚಾರ್ಜ್ ನಡೆಸಿದ ಪೊಲೀಸರು ಈಗ ದೌರ್ಜನ್ಯಕ್ಕೆ ಒಳಪಟ್ಟ ಕೊರಗ ಸಮುದಾಯದ ಮೇಲೆಯೇ ಸರ್ಕಾರದ ಜಾಮೀನು ರಹಿತ ಸೆಕ್ಷನ್‌ಗಳ ಪ್ರಕರಣ ದಾಖಲಿಸಿದ್ದು ಅತ್ಯಂತ ಹೇಯ ಕೃತ್ಯ.
ಹಿಂದೂ ರಕ್ಷಣೆಯ ಬಗ್ಗೆ ಭಯಂಕರ ಭಾಷಣ ಬಿಗಿಯುವ ಕರಾವಳಿಯ ಬಿಜೆಪಿ ನಾಯಕರು ಎಲ್ಲಿ ಅಡಗಿದ್ದಾರೆ? ಕೊರಗ ಸಮುದಾಯ ಹಿಂದುಗಳಾಗಿ ಕಾಣಲಿಲ್ಲವೇ? ನೈಜ ಹಿಂದೂಗಳಿಗೆ ಹಿಂದುತ್ವವಾದಿ ಬಿಜೆಪಿಯೇ ಅಪಾಯಕಾರಿ ಎನ್ನುವುದು ಇದರಿಂದಲೇ ಸಾಭೀತಾಗುತ್ತಿದೆ, ದಲಿತರು, ಶೋಷಿತರ ಮೇಲಿನ ದೌರ್ಜನ್ಯವನ್ನು ಸರ್ಕಾರವೇ ಪ್ರಾಯೋಜಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
https://twitter.com/INCKarnataka/status/1476844296791683076?s=20
ಗೃಹ ಸಚಿವರೇ, ನಿಮ್ಮ ಇಲಾಖೆಯ ಈ ಹೇಯ ಕೃತ್ಯಗಳಿಗೆ ನಿಮ್ಮದೂ ಸಹಕಾರವಿದೆಯೇ? ಯಾರ ಓಲೈಕೆಗಾಗಿ ಕೊರಗ ಸಮುದಾಯದ ವಿರುದ್ಧ ಈ ಷಡ್ಯಂತ್ರ ರೂಪಿಸಿದ್ದೀರಿ? ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದಲ್ಲಿ ಹಿಂದುಗಳು & ಹಿಂದುಳಿದವರು ಬದುಕುವ ಸ್ವತಂತ್ರ ಹೊಂದಿಲ್ಲವೇ ಎಂದು ಪ್ರಶ್ನಿಸಿದೆ.








