ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ ಬಯೋಪಿಕ್ ನಲ್ಲಿ ಆಗಿ ಅನುಷ್ಕಾ ಶರ್ಮಾ..!

1 min read

ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ ಬಯೋಪಿಕ್ ನಲ್ಲಿ ಆಗಿ ಅನುಷ್ಕಾ ಶರ್ಮಾ..!

ಮುಂಬೈ : ಬಾಲಿವುಡ್ ನಟಿ , ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನ ಮದುವೆಯಾದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿತ್ತು.. ಅದ್ರಲ್ಲೂ ಮಗುವಿಗೆ ಜನ್ಮ ನೀಡಿದ ನಂತರ ಕೆಲ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದರು.. ಇದೀಗ  ವಾಮಿಕ ಜನನದ ನಂತರ ಇದೇ ಮೊದಲ ಬಾರಿಗೆ ತಮ್ಮ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ..

ಭಾರತೀಯ ಮಹಿಳಾ ಕ್ರಿಕೆಟ್ ನ ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮು ಅವರ ಬಯೋಪಿಕ್ ನಲ್ಲಿ  ಅನುಷ್ಕಾ ಬಣ್ಣ ಹಚ್ಚಲಿದ್ದಾರೆ. ಗೋಸ್ವಾಮಿ ಪಾತ್ರದಲ್ಲಿ ಅನುಷ್ಕಾ ನಟಿಸುತ್ತಿದ್ದು, ಸಿನಿಮಾಗೆ ‘ ಚಕ್ದಾ ಎಕ್ಸ್ ಪ್ರೆಸ್’ ಎಂಬ ಟೈಟಲ್ ಇಡಲಾಗಿದೆ..

ಸಿನಿಮಾದ ಟೈಟಲ್ ಪೋಸ್ಟರ್ ಮತ್ತು ಟೀಸರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾ ನೆಟ್‍ಫ್ಲಿಕ್ಸ್ ಓಟಿಟಿಯಲ್ಲಿ ಬರಲಿದೆ.

anushka sharma saakshatv

ಅಲ್ಲದೇ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅನುಷ್ಕಾ ಇದು ನಿಜವಾಗಿಯೂ ವಿಶೇಷ ಸಿನಿಮಾವಾಗಿದೆ. ಏಕೆಂದರೆ ಇದು ಅದ್ಭುತ ತ್ಯಾಗದ ಕಥೆಯಾಗಿದೆ. ಮಾಜಿ ಭಾರತೀಯ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನ ಆಧಾರಿತ ಕಥೆಯೇ ‘ಚಕ್ಡಾ ಎಕ್ಸ್‌ಪ್ರೆಸ್‌’. ಇದು ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಕಣ್ಣು ತೆರೆಸಿದ ಕಥೆ.

ಜೂಲನ್ ಅವರು ಕ್ರಿಕೆಟರ್ ಆಗಲು ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ದೇಶವನ್ನು ಹೆಮ್ಮೆಪಡಲು ನಿರ್ಧರಿಸಿದ್ದರು. ಆದರೆ ಆ ಸಮಯದಲ್ಲಿ ಕ್ರೀಡೆಯನ್ನು ಆಡುವ ಬಗ್ಗೆ ಮಹಿಳೆಯರು ಯೋಚಿಸುವುದು ತುಂಬಾ ಕಠಿಣವಾಗಿತ್ತು.

ಆ ಸಮಯದಲ್ಲಿ ಅವರು ಎದುರಿಸಿದ ಕಠಿಣ ಸಮಯವನ್ನು ಈ ಚಿತ್ರ ನಿಮ್ಮ ಕಣ್ಣು ಮುಂದೆ ತೋರಿಸುತ್ತದೆ. ಜೂಲನ್ ಅವರ ಜೀವನ ಮತ್ತು ಮಹಿಳಾ ಕ್ರಿಕೆಟ್ ಅನ್ನು ರೂಪಿಸಿದ ಹಲವಾರು ನಿದರ್ಶನಗಳು ಈ ಸಿನಿಮಾ ಪ್ರೇಕ್ಷಕರಿಗೆ ತಿಳಿಯುತ್ತೆ ಎಂದು ಬರೆದುಕೊಂಡಿದ್ದಾರೆ..

ಅನುಷ್ಕಾ ಅವರು 2018 ರಲ್ಲಿ ಬಿಡುಗಡೆಯಾದ ಆನಂದ್ ಎಲ್ ರೈ ನಿರ್ದೇಶನದ ‘ಝೀರೋ’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಶಾರುಖ್ ಖಾನ್ ನಾಯಕರಾಗಿದ್ದರು.. ಆದ್ರೆ ಈ ಸಿನಿಮಾ ಕನ್ನಡದ KGF 2 ಮುಂದೆ ಅಟ್ಟರ್ ಫ್ಲಾಪ್ ಆಗಿತ್ತು..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd