ಚಿತ್ರದುರ್ಗ: ಹೆಮ್ಮಾರಿ ಕೊರೊನಾ ಕಾಟದ ನಡುವೆಯೇ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಸುಲೇನಹಳ್ಳಿ ಗ್ರಾಮದಲ್ಲಿ ವಿಚಿತ್ರ ರೋಗವೊಂದು ಕಾಣಿಸಿಕೊಂಡಿದ್ದು ಜನರ ನಿದ್ದೆಗೆಡಿಸಿದೆ.
ಸುಲೇನಹಳ್ಳಿ ಗ್ರಾಮದ 35ಕ್ಕೂ ಹೆಚ್ಚು ಜನರಿಗೆ ಜ್ವರ, ಮೈಕೈ ನೋವು, ಕಾಲು ಊತ ಸೇರಿದಂತೆ ಹಲವು ತೊಂದರೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಕಳೆದ ಒಂದು ವಾರದಿಂದ ಕಾಣಿಸಿಕೊಂಡ ಖಾಯಿಲೆಯಿಂದ ಜನರು ಹೈರಾಣಾಗಿದ್ದು, ಮೊಳಕಾಲ್ಮೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಏಕಾಏಕಿ ಗ್ರಾಮದಲ್ಲಿ ವಿಚಿತ್ರ ರೋಗ ವ್ಯಾಪಿಸಿದ್ದರಿಂದ ಸುಲೇನಹಳ್ಳಿ ಜನರಲ್ಲಿ ಆತಂಕ ಶುರುವಾಗಿದ್ದು, ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಚಳಿಗಾಲದ ಕೊರೊನಾತಂಕ, ಕಾಲರಾ ಶಂಕೆಯೂ..!
ರಾಜ್ಯದಲ್ಲಿ ಚಳಿಗಾಲ ಆರಂಭವಾಗಿದ್ದು, ಕೊರೊನಾ ಅಟ್ಟಹಾಸ ಮುಂದುರೆಯುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.
ಕೊರೊನಾ ಲಕ್ಷಣಗಳಾದ ಜ್ವರ, ಮೈಕೈ ನೋವಿನಿಂದ ಜನರು ಬಳಲುತ್ತಿದ್ದಾರೆ. ಜತೆಗೆ ಕಾಲು ಊತದಂತಹ ಸಮಸ್ಯೆಗಳ್ನು ಎದುರಿಸುತ್ತಿದ್ದು, ಕಾಲರಾದ ಶಂಕೆಯೂ ವ್ಯಕ್ತವಾಗಿದೆ.
ವಿದೇಶಗಳಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಳಕಾಲ್ಮೂರಿನ ಸುಲೇನಗಹಳ್ಳಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel