ಸ್ಲೀಪರ್ ಕ್ಲಾಸ್ ಟಿಕೆಟ್‌ ದರದಲ್ಲಿ ಪ್ರಯಾಣಿಕರಿಗೆ ಎಸಿ ಬೋಗಿಯಲ್ಲಿ ಪ್ರಯಾಣ !

1 min read
anyone can travel in AC bogie on sleeper class ticket

ಸ್ಲೀಪರ್ ಕ್ಲಾಸ್ ಟಿಕೆಟ್‌ ದರದಲ್ಲಿ ಪ್ರಯಾಣಿಕರಿಗೆ ಎಸಿ ಬೋಗಿಯಲ್ಲಿ ಪ್ರಯಾಣ !

ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಇಂತಹ ಯೋಜನೆಯಲ್ಲಿ ಸ್ಲೀಪರ್ ಕ್ಲಾಸ್ ಟಿಕೆಟ್‌ ದರದಲ್ಲಿ ಪ್ರಯಾಣಿಕರು ಎಸಿ ಬೋಗಿಯಲ್ಲಿ ಪ್ರಯಾಣಿಸುವ ಸೌಲಭ್ಯ ಕೂಡ ‌ಸೇರಿದೆ. ಪ್ರಯಾಣಿಕರಿಗೆ ವಿಭಿನ್ನ ಅನುಭವ ನೀಡಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.
anyone can travel in AC bogie on sleeper class ticket
ಇದರಿಂದ ಸಾಮಾನ್ಯ ಜನರು ಕಡಿಮೆ ಹಣದಲ್ಲಿ ಎಸಿ ಕೋಚ್‌ನಲ್ಲಿ ಪ್ರಯಾಣವನ್ನು ಆನಂದಿಸಬಹುದು. ಇದು ರೈಲ್ವೆಯ ಆದಾಯವನ್ನು ಹೆಚ್ಚಿಸುತ್ತದೆ ಎಂದು ರೈಲ್ವೇ ನಂಬಿದೆ.

ಉತ್ತರ ರೈಲ್ವೆಯ ಜನರಲ್ ಮ್ಯಾನೇಜರ್ ಅಶುತೋಷ್ ಗಂಗಲ್ ಪ್ರಕಾರ, ಸ್ಲೀಪರ್ ಕೋಚ್‌ನ ಪ್ರಯಾಣಿಕರನ್ನು ಎಸಿ ಕೋಚ್‌ಗೆ ಆಕರ್ಷಿಸಲು ರೈಲ್ವೆ ಈ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ, ಎಕಾನಮಿ ಕ್ಲಾಸ್ ಕೋಚ್‌ಗಳನ್ನು ಎಸಿ -3 ರೂಪದಲ್ಲಿ ತಯಾರಿಸಲಾಗುತ್ತಿದೆ.

ದುಬಾರಿ ದರಗಳಿಂದಾಗಿ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದ ಪ್ರಯಾಣಿಕರು, ಅಗ್ಗದ ದರದಲ್ಲಿ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶವನ್ನು ಪಡೆಯುತ್ತಾರೆ. ಅದರ ದರವು AC 3 ದರಕ್ಕಿಂತ 10 ಪ್ರತಿಶತ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ.

ಎಸಿ -3 ಎಕಾನಮಿ ಕ್ಲಾಸ್‌ನಲ್ಲಿ 83 ಸೀಟುಗಳಿದ್ದರೆ, ಕಬಿ ಎಸಿ ಕೋಚ್‌ಗಳಲ್ಲಿ 72 ಸೀಟ್‌ಗಳಿವೆ ಎಂದು ಹೇಳಲಾಗಿದೆ. ಎಸಿ -3 ಎಕಾನಮಿ ಕ್ಲಾಸ್‌ನಲ್ಲಿ ಸೀಟುಗಳ ನಡುವಿನ ಅಂತರವನ್ನು ಕಡಿಮೆ ಮಾಡಲಾಗಿದೆ.

ಇದು ರೈಲ್ವೆಯ ಆದಾಯವನ್ನು ಹೆಚ್ಚಿಸುತ್ತದೆ ಎಂದು ಜನರಲ್ ಮ್ಯಾನೇಜರ್ ಅಶುತೋಷ್ ಗಂಗಾಲ್ ಹೇಳಿದ್ದಾರೆ. ಎಸಿ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಮತ್ತು ತೃತೀಯ ದರ್ಜೆಯ ಕೋಚ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಶೀಘ್ರದಲ್ಲೇ ಎಸಿ -3 ಎಕಾನಮಿ ಕ್ಲಾಸ್ ಬೋಗಿಗಳು ನಿಲ್ದಾಣಗಳಲ್ಲಿ ಕಾಣಿಸಿಕೊಳ್ಳಲಿದೆ. ಕೋಚ್‌ಗಳ ಓಡಾಟ ಆರಂಭಿಸಿದ ನಂತರ, ಅದಕ್ಕಾಗಿ ನೀವು ಟಿಕೆಟ್ ಬುಕ್ ಮಾಡಬಹುದು.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#ACbogie #sleeperclass #ticket

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd