‘APPLE’ ನ ‘Find My App’ ನಲ್ಲಿ ಶೀಘ್ರವೇ ಹೊಸ ‘Item Safety Alert’ ಫೀಚರ್ ಸಿಗಲಿದೆ..!
‘ಆಪಲ್’ ನ ಫೈಂಡ್ ಮೈ ಆಪ್ ನಲ್ಲಿ ಬಳಕೆದಾರರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಹೊಸ ಫೀಚರ್ ಒಂದನ್ನ ನೀಡಲು ಕಂಪನಿ ಮುಂದಾಗಿದೆ. ಮೊಬೈಲ್ ಹ್ಯಾಕ್ ಅಥವಾ ಟ್ರ್ಯಾಕಿಂಗ್ ಅನ್ನ ತಡೆಯಲು ಹೊಸ ಫೀಚರ್ ನಿಡಲು ಕಂಪನಿ ಕೆಲಸ ಮಾಡ್ತಿದೆ. ಶೀಘ್ರವೇ ಈ ಫೀಚರ್ ಆಪ್ ನಲ್ಲಿ ಲಭ್ಯವಾಗಲಿದೆ. ಇದರಿಂದಾಗಿ ಲೊಕೇಶನ್ ಟ್ರ್ಯಾಕ್, ಬ್ರಾಡ್ ಕಾಸ್ಟಿಂಗ್ ಡೀಟೇಲ್ಸ್ ಸೋರಿಕೆಯಾಗುವುದನ್ನ ಅಥವಾ ಟ್ರ್ಯಾಕ್ ಆಗುವುದು ನಿಮಗೆ ತಿಳಿಯಲಿದ್ದು, ನೀವು ಅದನ್ನ ತಡೆಯಬಹುದಾಗಿದೆ. ನಿಮ್ಮ ಲೊಕೇಶನ್ ಅಥವ ಮೊಬೈಲ್ ಟ್ರ್ಯಾಕ್ ಆದಲ್ಲಿ ‘ITEM SAFTEY ALERT’ ಫೀಚರ್ ನಿಮಗೆ ನೋಟಿಫಿಕೇಶನ್ ಕಳುಹಿಸುತ್ತೆ. ಈ ಮೂಲಕ ನೀವು ಟ್ರ್ಯಾಕಿಂಗ್ ಅನ್ನ ಡಿಸೇಬಲ್ ಮಾಡಬಹುದಾಗಿದೆ.