ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : TMC 291 ಅಭ್ಯರ್ಥಿಗಳ ಪಟ್ಟಿ ರಿಲೀಸ್..!

1 min read

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : TMC 291 ಅಭ್ಯರ್ಥಿಗಳ ಪಟ್ಟಿ ರಿಲೀಸ್..!

ಪಶ್ಚಿಮ ಬಂಗಾಳದಲ್ಲಿ   ಇದೇ ತಿಂಗಳಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯ ಕಾವು ರಂಗೇರಿದೆ. ಆಡಳಿತ ರೂಢ ಪಕ್ಷವಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಗದ್ದುಗೇರಲು ಶತಗಗತಾಯ ಪ್ರಯತ್ನ ಮಾಡ್ತಿದೆ. ಭರ್ಜರಿ ಮತಬೇಟೆಯಾಡ್ತಿದೆ. ಮತದಾರರನ್ನ ಸೆಳೆಯಲು ಹೊಸ ಹೊಸ ಸ್ಕೀಮ್ ಗಳನ್ನೂ ಪರಿಚಯಿಸಿದೆ. ಇದರ ನಡುವೆಯೇ TMC ಪಾರ್ಟಿಯು ಇಂದು 291 ಜನ  ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್ ಮಾಡಿದೆ.

ಹೌದು TMC ಕೇವಲ 291 ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧೆ ಮಾಡಲಿದೆ. ಇನ್ನೂ ದೀದಿಗೆ ಫ್ರೈಡೇ ಲಕ್ಕಿ ಡೇ ಾಗಿರೋದ್ರಿಂದಲೇ ಇಂದು ಅವರು ತಮ್ಮ ಪಾರ್ಟಿಯ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದಾರೆಂದೇ ಹೇಳಲಾಗ್ತಿದೆ.

ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಬಂಗಾಳದಲ್ಲಿ ಶುರುವಾಯ್ತು ‘ಮಾ’ ಕ್ಯಾಂಟೀನ್..!

ಇನ್ನೂ 2011 ಹಾಗೂ 2016ರಲ್ಲೂ ಸಹ ದೀದಿ ಶುಕ್ರವಾರದಂದೇ ಪಕ್ಷದ ಅಭ್ಯರ್ಥಿಗಳ ಘೋಷಣೆ ಮಾಡಿದ್ದರು. ಇನ್ನೂ ವಿಶೇಷ ಅಂದ್ರೆ  ಈ ಬಾರಿ 100 ಕ್ಕೂ ಹೆಚ್ಚು ಹೊಸಬರಿಗೆ ಅವಕಾಶ ನಿಡಲಾಗಿದೆ. ಇನ್ನೂ ಅಭ್ಯರ್ಥಿಗಳ ಪೈಕಿ 50 ಮಹಿಳೆಯರು ಹಾಗೂ 42 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಜನರು ಇಷ್ಟಪಡುವ ಅಭ್ಯರ್ಥಿಗಳಿಗೆ ನಾವು ಈ ಬಾರಿ ಟಿಕೆಟ್ ನೀಡಿದ್ದೇವೆ. ಆದ್ರೆ ಕೆಲವರಿಗೆ ಟಿಕೆಟ್ ಕೈತಪ್ಪಿಹೋಗಿರುವ ಬೇಸರವಿದೆ. ಅಂತಹವರ ಜೊತೆಗೆ ಮಾತನಾಡಿ ಮುಂದಿನ ಲೆಜಿಸ್ಲೇಟಿವ್ ಚುನಾವಣೆಗಳಲ್ಲಿ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಇನ್ನೂ ಪ್ರಸ್ತುತ ಶಾಸಕರಾಗಿರುವ 27-28 ಮಂದಿಗೂ ಟಿಕೆಟ್ ಕೈತಪ್ಪಿಹೋಗಿದೆ.

ಅಂದ್ಹಾಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಕಣಕ್ಕೆ ಧುಮುಕುತ್ತಿದ್ದು, ಅವರ ವಿರುದ್ಧವಾಗಿ ಬಿಜೆಪಿಯಿಂದ ಸುವೇಂದು ಅಧಿಕಾರಿ ಕಣಕ್ಖಿಳಿಯುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಇನ್ನೂ ಈ ಬಾರಿ ಬಿಜೆಪಿ ತೃಣಮೂಲ ಕಾಂಗ್ರೆಸ್ ಗೆ ಟಫ್ ಕಾಂಪಿಟೇಷನ್ ಕೊಡಲಿದ್ದು, ನೆಕ್ ಟು ನೆಕ್ ಫೈಟ್ ಏರ್ಪಡಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd