ಐಪಿಎಲ್ ಟೂರ್ನಿಯಲ್ಲಿ ಸೋಮವಾರ ಆರ್ ಸಿಬಿ ಹಾಗೂ ಹೈದರಾಬಾದ್ ಮಧ್ಯೆ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಪ್ರತಿರೋಧ ತೋರಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೈದರಾಬಾದ್ ನೀಡಿದ್ದ 288 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ್ದ ಆರ್ ಸಿಬಿಗೆ ದಿನೇಶ್ ಕಾರ್ತಿಕ್ ಬೆನ್ನೆಲುಬಾಗಿ ನಿಂತಿದ್ದರು. ದಿನೇಶ್ ಕೇವಲ 35 ಬೌಲ್ ಗಳಿಗೆ 83 ರನ್ ಗಳಿಸಿದ್ದರು. ಅವರ ಈ ಆಟ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಹೀಗಾಗಿ ಎಲ್ಲರೂ ಟಿ20 ವಿಶ್ವಕಪ್ ನ ತಂಡದಲ್ಲಿ ದಿನೇಶ್ ಕಾರ್ತಿಕ್ ಗೆ ಸ್ಥಾನ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.
ಈ ಹಿಂದೆ ಟಿ20 ವಿಶ್ವಕಪ್ನಲ್ಲಿ ದಿನೇಶ್ ಕಾರ್ತಿಕ್ ಆಟ ಆಡಿದ್ದರು. ಆನಂತರ ಅವರು ಮರಳಿ ತಂಡ ಸೇರಿರಲಿಲ್ಲ. ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಕೂಡ ದಿನೇಶ್ ಆಟವನ್ನು ಮೆಚ್ಚಿಕೊಂಡಿದ್ದಾರೆ. ‘ಟಿ20 ವಿಶ್ವಕಪ್ನಲ್ಲಿ ಸ್ಥಾನ ನೀಡಲೇಬೇಕು ಎನ್ನುವ ರೀತಿಯಲ್ಲಿ ಆಡುತ್ತಿದ್ದೀರಿ. ನೀವು ದಿನ ಕಳೆದಂತೆ ಉತ್ತಮವಾಗುತ್ತಿದ್ದೀರಿ’ ಎಂದು ಪ್ರಶಂಸಿಸಿದ್ದಾರೆ.