ಪವಿತ್ರ ಗಂಗೆಯಲ್ಲಿ ಜನಿಸಿದ ಶಾಂತನು ಪುತ್ರ, ಸತ್ಯವ್ರತ, ದೇವಪುತ್ರ, ತಂದೆಯ ಆಜ್ಞಾಪಾಲಕ, ಆಜನ್ಮ ಬ್ರಹ್ಮಚಾರಿ, ನಿಷ್ಠೆಯ ಪ್ರತೀಕ, ವಷಿಷ್ಟ ಮುನಿಯ ಶಾಪದಿಂದ ಭೂಮಿಯಲ್ಲಿ ಜನಿಸಿದ ಅಷ್ಟವಸುಗಳಲ್ಲೊಬ್ಬನಾದ ಬಲಾಡ್ಯ ಭೀಷ್ಮ ಮಹಾಭಾರತದಲ್ಲಿ ಬರುವ ಬಹುಮುಖ್ಯ ಪಾತ್ರ. ಪ್ರಸ್ತುತ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಪೌರಾಣಿಕ ಧಾರಾವಾಹಿ ಮಹಾಭಾರತದಲ್ಲಿ ಭೀಷ್ಮನಾಗಿ ಕಾಣಿಸಿಕೊಂಡಿರುವ ಇವರ ನಿಜವಾದ ಹೆಸರು ಆರವ್ ಚೌಧ್ರಿ. ಆರವ್ ಧರ್ಮಧೂತ ಸಚ್ಚಾರಿತ್ಯ ಭೀಷ್ಮನ ಪಾತ್ರವನ್ನ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದು, ಜನರ ಮನದಲ್ಲಿ ಭೀಷ್ಮನ ಚಾರಿತ್ಯ ಅಚ್ಚಳಿಯದೆ ಉಳಿಯದಂತೆ ಮಾಡಿರುವ ನಟ..!
ಆರವ್ 23 ನವೆಂಬರ್ 1981 ರಾಜಸ್ತಾನದ ಜೈಪುರದಲ್ಲಿ ಜನಿಸಿದ್ದು, ಪ್ರಸ್ತುತ ಅವರ ಪತ್ನಿ ಹಾಗೂ ಪರಿವಾರದೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ. ಜೈಪುರದ ಸೇಂಟ್ ಕ್ಷೇವಿಯರ್ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಮುಗಿಸಿಕೊಂಡಿರುವ ಆರವ್ ಲಾಸ್ ಏಂಜಲ್ಸ್ ನಲ್ಲಿ ಹಾಲಿವುಡ್ ಫಿಲ್ಮ್ ಇನ್‌ಸ್ಟಿಟ್ಯೂಟ್ ನಲ್ಲಿ ಡಿಗ್ರಿ ಪಡೆದುಕೊಂಡಿದ್ದಾರೆ. ಆರವ್ ಅವರು ಮಾಡಲಿಂಗ್ ದಿನಗಳಲ್ಲಿ ಹಲವಾರು ರ‍್ಯಾಂಪ್ ಶೋಗಳಲ್ಲಿ ಭಾಗವಹಿಸಿದ್ದು, ಮಿಸ್ಟರ್ ಇಂಡಿಯಾ ಆಗಿ ಸಹ ಆಯ್ಕೆಯಾಗಿದ್ದರು. ನಟನೆ ಜೊತೆಗೆ ಆರವ್ ಅನೇಕ ಮ್ಯೂಸಿಕಲ್ ವಿಡಿಯೋಗಳನ್ನು ಕಂಪೋಸ್ ಮಾಡಿದ್ದಾರೆ.
ಆರವ್ ಬಾಲಿವುಡ್ ನಲ್ಲಿ ಲಾಡೋ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುವ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ ಆರವ್ ಗೆ ಬಿಗ್ ಸಕ್ಸಸ್ ತಂದುಕೊಟ್ಟಿತ್ತು. ಬಾಲಿವುಡ್ ಅಲ್ದೇ ಆರವ್ ಕನ್ನಡ , ತೆಲುಗು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ಅದ್ರಲ್ಲೂ ೨೦೦೧ರಲ್ಲಿ ಹಾಲಿವುಡ್ ನ ಡೆಡ್ಲಿ ಡಿಸಿಪಲ್ ಚಿತ್ರದಲ್ಲಿಯೂ ಆರವ್ ಮುಖ್ಯಭೂಮಿ ನಿಭಾಯಿಸಿದ್ರು. ಆದ್ರೆ ಆರವ್ ಗೆ ಹೆಚ್ಚು ಹೆಸರುಗಳಿಸಿಕೊಟ್ಟ ಪಾತ್ರ ಅಂದ್ರೆ ಮಹಾಭಾರತದ ಭೀಷ್ಮನ ಪಾತ್ರ. ಮಹಾಭಾರತದಲ್ಲಿ ಬೀಷ್ಮನಾಗಿ ಮಿಂಚಿ ಮನೆಮಾತಾಗಿರುವ ಆರವ್ ಮಹಾರಾಣಾ ಪ್ರತಾಪ್, ಗುಲಾಲ್, ವೀರ್ ಶಿವಾಜಿ, ಜಿಂದಗಿ ಮಿಲ್ ಕೆ ಬಿತಾಯೇಂಗೇ ಧಡ್‌ಕನ್ ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ, ಝಾನ್ಸಿ ಕೀ ರಾಣಿ, ಆರಂಭ್ ಸೇರಿದಂತೆ ಹಲವಾರು ಟಿಲಿವಿಷನ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಾಡೋ ನಂತರ ಧೂಮ್, ರೈಟ್ ಯಾ ರಾಂಗ್, ಕನ್ನಡದ ಅಜಿತ್, ವಿವೇಗಮ್, ಹೌಸ್‌ಫುಲ್ ೩, ಭಾರತ್, ಆಕ್ಷನ್, ೮೮ ಆಂಟಾಪ್ ಹಿಲ್, ಬಿಎ ಪಾಸ್ ಸಿನೆಮಾಗಳಲ್ಲೂ ಅಭಿನಯಿಸಿದ್ದಾರೆ.








