Arun Singh | ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ
ಬೆಳಗಾವಿ : ಕರ್ನಾಟಕದಲ್ಲಿ ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ರಾಜ್ಯದಲ್ಲಿ ವಿಜಯ ಸಂಕಲ್ಪ ಸಭೆ ಮಾಡ್ತಿದ್ದೇವೆ. ಜನರಿಂದ, ಕಾರ್ಯಕರ್ತರಿಂದ ಉತ್ತಮ ಬೆಂಬಲ ಸಿಗುತ್ತಿದೆ.
ಕರ್ನಾಟಕದಲ್ಲಿ ಪ್ರಚಂಡ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ. 150 ಕ್ಕೂ ಅಧಿಕ ಬಿಜೆಪಿ ಸ್ಥಾನಗಳು ಬರಲಿವೆ, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಮೋದಿ, ಬೊಮ್ಮಾಯಿ ಸರ್ಕಾರದ ಸಾಧನೆ ಜನರಿಗೆ ತಲುಪಿಸುತ್ತೇವೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಲಶಾಲಿಯಾಗಿದೆ. ದೇಶದಲ್ಲಿ ಬಿಜೆಪಿ ಪರ ಗೆಲುವಿನ ಟ್ರೆಂಡ್ ಇದೇ, ಗೋವಾ, ಉತ್ತರಾಕಾಂಡ, ಮಣಿಪುರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ.
ಹಿಮಾಚಲ ಮತ್ತು ಗುಜರಾತಿನಲ್ಲೂ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್ ಸೋಲುವ ಸ್ಥಿತಿಯಲ್ಲಿ ಇದೇ, ಬಿಜೆಪಿ ಗೆಲ್ಲುವ ಸ್ಥಿತಿಯಲ್ಲಿ ಇದೇ, ಕರ್ನಾಟಕದಲ್ಲಿ ಮೊದಲಿಗಿಂತ ಅಧಿಕ ಸ್ಥಾನ ಗೆದ್ದು ಸರ್ಕಾರ ಮಾಡುತ್ತೇವೆ.
ಬಿಜೆಪಿ ಸರ್ಕಾರ ಬಡವರು, ರೈತರು, ಮಹಿಳೆಯರ ಪರ ಕೆಲಸ ಆಗಿದೆ. ಪ್ರಧಾನಮಂತ್ರಿ ಮೋದಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ.
ಬಿಜೆಪಿ ಗೆಲುವಿನ ಹಾದಿಯಲ್ಲಿ ಇದ್ದರೆ ಕಾಂಗ್ರೆಸ್ ಸೋಲು ಹಾದಿಯಲ್ಲಿ ಇದೇ ಎಂದು ಅರುಣ್ ಸಿಂಗ್ ಹೇಳಿದ್ದಾರೆ.