Asia-cup-2022 | ಕ್ರೂರವಾಗಿ ವರ್ತಿಸಿದ ಅಫ್ಘಾನ್ ಫ್ಯಾನ್ಸ್
ಏಷ್ಯಾಕಪ್ 2022ರ ಸೂಪರ್ ನಾಲ್ಕರ ಭಾಗವಾಗಿ ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಒಂದು ವಿಕೆಟ್ ಅಂತರದೊಂದಿಗೆ ಗೆಲುವು ಸಾಧಿಸಿದೆ.
ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಸಮರದಲ್ಲಿ ಪಾಕ್ ತಂಡದ ಐದನೇ ಕ್ರಮಾಂಕದ ನಸೀಮ್ ಷಾ.. ಕೊನೆಯ ಓವರ್ ನಲ್ಲಿ ಎರಡು ಸಿಕ್ಸರ್ ಗಳನ್ನು ಸಿಡಿಸಿ ಪಾಕ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಅಲ್ಲಿಯವರೆಗೂ ಆಫ್ಘಾನ್ ಕೈಯಲ್ಲಿದ್ದ ಪಂದ್ಯ ಕೊನೆಯ ಓವರ್ ನಲ್ಲಿ ಕೈ ಜಾರಿ ಹೋಯ್ತು.
ಆದ್ರೆ ಈ ಸೋಲನ್ನು ಭರಿಸದ ಅಫ್ಘಾನ್ ಅಭಿಮಾನಿಗಳು ಮೈದಾನದಲ್ಲಿಯೇ ಓವರ್ ಆಗಿ ರಿಯಾಕ್ಟ್ ಮಾಡಿದ್ದಾರೆ.

ಶಾರ್ಜಾ ಮೈದಾನದಲ್ಲಿ ಅಲ್ಲಕಲ್ಲೋಲ ಸೃಷ್ಠಿ ಮಾಡಿದ್ದಾರೆ. ಕುರ್ಚಿಗಳನ್ನು ಮುರಿದು, ಪಾಕಿಸ್ತಾನ್ ಅಭಿಮಾನಿಗಳ ಮೇಲೆ ದಾಳಿ ನಡೆಸಿ ಕ್ರೂರವಾಗಿ ನಡೆದುಕೊಂಡಿದ್ದಾರೆ.
ಅಲ್ಲಿಯವರೆಗೂ ಪಾಕ್ ಅಭಿಮಾನಿಗಳೊಂದಿಗೆ ಕೂತು ಮ್ಯಾಚ್ ನೋಡಿದ ಅಫ್ಘಾನ್ ಆಟಗಾರರು ಒಂದೇ ಸಾರಿ ಅವರ ಮೇಲೆ ಮುಗಿಬಿದ್ದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯಾವುದೇ ಆಟವಾಗಿರಲಿ ಸೋಲು ಗೆಲುವು ಸಹಜ. ಅದನ್ನ ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಳ್ಳಬೇಕು.
ಅದನ್ನ ಬಿಟ್ಟು ಹೀಗೆ ಹಲ್ಲೆಗೆ ಮುಂದಾಗೋದು ಸರಿಯಲ್ಲ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಜೆಂಟಲ್ ಮೆನ್ ಗೇಮ್ ನಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದ್ದಾರೆ.