Asia Cup 2022 : ಕೆ.ಎಲ್.ರಾಹುಲ್ ಬೇಡ.. ಸೂರ್ಯ ಕುಮಾರ್ ಇರಲಿ..
ಟಿ 20 ವಿಶ್ವಕಪ್ ಗೂ ಮುನ್ನಾ ಟೀಂ ಇಂಡಿಯಾ ಏಷ್ಯಾ ಕಪ್ ಹೋರಾಟಕ್ಕೆ ಸಜ್ಜಾಗುತ್ತಿದೆ. ಆಗಸ್ಟ್ 27 ರಿಂದ ಆರಂಭವಾಗಲಿರುವ ಈ ಮೆಗಾ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಈಗಾಗಲೇ ಏಷ್ಯಾಕಪ್ ಗೆ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಕೆಲವು ತಿಂಗಳಿನಿಂದ ತಂಡದಿಂದ ದೂರವಾಗಿದ್ದ ಕೆ.ಎಲ್.ರಾಹುಲ್ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾದ ಆರಂಭಿಕರ ಸ್ಥಾನದ ಬಗ್ಗೆ ಒಂದು ಕ್ಲಾರಿಟಿ ಸಿಕ್ಕಿದೆ.
ಈ ಹಿಂದೆ ಕೆ.ಎಲ್.ರಾಹುಲ್ ತಂಡದಿಂದ ದೂರವಾಗಿದ್ದ ಕಾರಣದಿಂದಾಗಿ ಟೀಂ ಮ್ಯಾನೆಜ್ ಮೆಂಟ್ ಕೆಲವು ಪ್ರಯೋಗಗಳನ್ನು ಮಾಡಿತ್ತು. ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಜೊತೆ ಪಂತ್ ಇನ್ನಿಂಗ್ಸ್ ಓಪನ್ ಮಾಡಿದ್ರೆ, ವೆಸ್ಟ್ ಇಂಡೀಸ್ ಸರಣಿಯಲ್ಲಿ ಸೂರ್ಯ ಕುಮಾರ್ ಯಾದವ್ ಆರಂಭಿಕರ ಅವತಾರವೆತ್ತಿದ್ದರು.
ಈ ಪ್ರಯೋಗದಲ್ಲಿ ಪಂತ್ ಫೇಲ್ ಆದ್ರೆ ಸೂರ್ಯ ಕುಮಾರ್ ಯಾದವ್ ಸಕ್ಸರ್ ಆಗಿದ್ದರು. ಈ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಓಪನರ್ ಆಗಿದ್ದ ಸೂರ್ಯ ಕುಮಾರ್ ಯಾದವ್ 135 ರನ್ ಗಳನ್ನು ಗಳಿಸಿದ್ದರು. ಇದೀಗ ಕೆ.ಎಲ್.ರಾಹುಲ್ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿರುವ ಕಾರಣ ಅವರೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ದಾನೀಷ್ ಕನೆರಿಯಾ, ರೋಹಿತ್ ಶರ್ಮಾ ಜೊತೆ ಸೂರ್ಯ ಕುಮಾರ್ ಅವರೇ ಇನ್ನಿಂಗ್ಸ್ ಆರಂಭಿಸಬೇಕು ಎಂದು ಅಭಿಪ್ರಾಯಟ್ಟಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಸೂರ್ಯ ಕುಮಾರ್ ಯಾದವ್, ಏಷ್ಯಾಕಪ್ ಗೆ ರೋಹಿತ್ ಶರ್ಮಾ ಜೊತೆಯಾಗಿ ಸೂರ್ಯ ಕುಮಾರ್ ಯಾದವ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ನಾನು ಭಾವಿಸುತ್ತೇನೆ. ಆತ ವಿಂಡೀಸ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಜೊತೆಕೂಡಿ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದ್ದರು. ಕೆ.ಎಲ್.ರಾಹುಲ್ ತಂಡಕ್ಕೆ ವಾಪಸ್ ಆಗಿದ್ದರೂ ಆತ ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಗೆ ಬಂದರೇ ಚೆನ್ನಾಗಿರುತ್ತದೆ ಎಂದು ವಾದಿಸಿದ್ದಾರೆ.
ರಾಹುಲ್ ಯಾವುದೇ ಸ್ಥಾನದಲ್ಲಿ ಅದ್ಭುತವಾಗಿ ಆಡಬಲ್ಲರು. ಆತ ಈ ಹಿಂದೆ ಸಾಕಷ್ಟು ಬಾರಿ ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಿದ್ದನ್ನ ನಾವು ನೋಡಿದ್ದೇವೆ. ಹೀಗಾಗಿ ರೋಹಿತ್ ಶರ್ಮಾ ಜೊತೆ ಸೂರ್ಯ ಕುಮಾರ್ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸಿದ್ರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.