Asia Cup 2022 | ರಾಹುಲ್ ದ್ರಾವಿಡ್ ಗೆ ಕಷ್ಟಕಾಲ
ಏಷ್ಯಾಕಪ್ 2022ರಲ್ಲಿ ಡಿಫೆಂಡಿಂಗ್ ಚಾಂಪಿಯನ್ ಆಗಿ ಕಣಕ್ಕಿಳಿದ ಟೀಂ ಇಂಡಿಯಾ ಕನಿಷ್ಠ ಫೈನಲ್ ಗೆ ತಲುಪಲು ಸಾಧ್ಯವಾಗದೇ ಟೂರ್ನಿಯಿಂದ ಹೊರಬಿದ್ದಿದೆ.
ಚುಟುಕು ಕ್ರಿಕೆಟ್ ನಲ್ಲಿ ಸತತ ಗೆಲುವುಗಳೊಂದಿಗೆ ಏಷ್ಯಾಕಪ್ ಗೆಲ್ಲುವ ಹಾಟ್ ಫೇವರೇಟ್ ಆಗಿತ್ತು.
ಆದ್ರೆ ಸೂಪರ್ 4 ರ ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿತ್ತು.
ಈ ಸೋಲುಗಳಿಗೆ ಕೋಚ್, ನಾಯಕ, ಟೀಂ ಮ್ಯಾನೇಜ್ ಮೆಂಟ್ ತೆಗೆದುಕೊಂಡ ನಿರ್ಧಾರಗಳೇ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಡು್ತಿದ್ದಾರೆ.

ಇದು ಹೀಗಿದ್ದರೇ ಟೀಂ ಇಂಡಿಯಾದ ಟೀಂ ಮ್ಯಾನೇಜ್ ಮೆಂಟ್, ಕೋಚ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಸೆಲೆಕ್ಟರ್ ಸಬಾ ಕರೀಂ ಮಾತನಾಡಿದ್ದು, ತನ್ನ ಹನಿಮೂನ್ ಪಿರಿಯಡ್ ಮುಗಿದಿದೆ ಎಂದು ರಾಹುಲ್ ದ್ರಾವಿಡ್ ಗೆ ಚೆನ್ನಾಗಿ ಗೊತ್ತು.
ತಂಡವನ್ನು ಅತ್ಯುತ್ತಮವಾಗಿಸಲು ತಮ್ಮ ಕೈಯಲ್ಲಾದ ಕೃಷಿ ಮಾಡಬೇಕು.
ಆದ್ರೆ ಆತನ ಪ್ರಯತ್ನಗಳು ಅದಕ್ಕೆ ಸರಿಹೊಂದುತ್ತಿಲ್ಲ. ನಿಜವಾಗಿ ಇದು ದ್ರಾವಿಡ್ ಗೆ ಕಷ್ಟ ಕಾಲ.
ಟಿ 20 ವರ್ಲ್ಡ್ ಕಪ್, ಏಕದಿನ ವರ್ಲ್ಟ್ ಕಪ್ ರೂಪದಲ್ಲಿ ಎರಡು ಮೆಗಾ ಐಸಿಸಿ ಟೂರ್ನಿಗಳು ಮುಂದಿವೆ.
ಈ ಎರಡೂ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆದ್ದರೇ ದ್ರಾವಿಡ್ ಗೆ ಸಂತೃಪ್ತಿ ದೊರಕುತ್ತದೆ ಎಂದಿದ್ದಾರೆ.
ಅದೇ ರೀತಿ ಸೌಥ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ದೇಶದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಗಳನ್ನು ಗೆದ್ದರೇ ದ್ರಾವಿಡ್ ಸಂತೋಷ ಪಡುತ್ತಾರೆ ಎಂದಿದ್ದಾರೆ.







