ಅಸ್ಸಾಂ ವಿಧಾನಸಭೆ ಕ್ಷೇತ್ರದ 47 ಸ್ಥಾನಗಳಿಗೆ ಇಂದು ಮತದಾನ..!
ಅಸ್ಸಾಂ: ಇಂದು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಬಿರುಸಿನಿಂದ ಆರಂಭವಾಗಿದೆ. ಅಸ್ಸಾಂ ವಿಧಾನ ಸಭಾ ಕ್ಷೇತ್ರದ 47 ಸ್ಥಾನಗಳಿಗೆ ಬಿರುಸಿಸಿನಿಂದ ಮತದಾನ ನಡೆಯುತ್ತಿದ್ದು, ಮುಂಜಾನೆಯಿಂದಲೇ ಜನ ಮತಗಟ್ಟೆಗಳತ್ತ ಧಾವಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
264 ಅಭ್ಯರ್ಥಿಗಳ ಭವಿಷ್ಯವನ್ನು ಜನರು ಇಂದು ನಿರ್ಧಾರ ಮಾಡಲಿದ್ದಾರೆ. ಇಂದು ಒಟ್ಟಾರೆ 11 ಸಾವಿರದ 537 ಮತಗಟ್ಟೆಗಳಲ್ಲಿ ಉತ್ತರ ಅಸ್ಸಾಂ ಮತ್ತು ಬ್ರಹ್ಮಪುತ್ರದ ಉತ್ತರ ನದಿ ತೀರದ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ.
ಒಟ್ಟಾರೆಯಾಗಿ, 81,09,815 ಮತದಾರರು ಮೊದಲ ಹಂತದಲ್ಲಿ ಮತದಾನ ಮಾಡಲಿದ್ದು, ಅವರಲ್ಲಿ, 40,77,210 ಪುರುಷರು ಮತ್ತು 40,32,481 ಮಹಿಳೆಯರು, 124 ತೃತೀಯ ಲಿಂಗೀಯರಿದ್ದಾರೆ. ಒಟ್ಟು ಅಸ್ಸಾಂ ವಿಧಾನಸಭೆಗೆ 3 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಶಾಸಕರಿಗೂ ನಂಬರ್ ಪ್ಲೇಟ್ ರೂಲ್ಸ್ – ವಾಹನಗಳ ಮೇಲೆ ಅನಧಿಕೃತವಾಗಿ ಹೆಸರು, ಚಿಹ್ನೆ / ಲಾಂಛನ ಇರುವಂತಿಲ್ಲ..!
ರಾಜಸ್ಥಾನದಲ್ಲಿ ಭಾರತೀಯ ಸೇನೆ ನಡೆಸಿದ ದೇಶೀ ನಿರ್ಮಿತ ಕ್ಷಿಪಣಿಯ ಪರೀಕ್ಷೆ ಯಶಸ್ವಿ..!
ಹುಚ್ಚಾಟ ಮುಂದುವರೆಸಿದ ಕಿಮ್ ಜಾಂಗ್ ಉನ್ – ಮತ್ತೊಂದು ಕ್ಷಿಪಣಿ ಪರೀಕ್ಷೆ..!