ಅಸ್ಸಾಂ – 12 ನೇ ತರಗತಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡ 22,000 ಬಾಲಕಿಯರಿಗೆ ಸ್ಕೂಟಿ
ಅಸ್ಸಾಂ, ಅಗಸ್ಟ್ 21: 12 ನೇ ತರಗತಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುವ ಒಟ್ಟು 22,000 ಅಸ್ಸಾಂ ಬಾಲಕಿಯರಿಗೆ ಸರ್ಕಾರದಿಂದ ಅಕ್ಟೋಬರ್ನಲ್ಲಿ ಸ್ಕೂಟಿಗಳನ್ನು ವಿತರಿಸಲಾಗುವುದು ಎಂದು ಸರ್ಕಾರ
ತಿಳಿಸಿದೆ.
ಅಸ್ಸಾಂ ಸರ್ಕಾರ ರಾಜ್ಯದ 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಗಳಿಸಿರುವ ಎಲ್ಲಾ ಬಾಲಕಿಯರಿಗೆ ಸ್ಕೂಟಿ ನೀಡಲು ನಿರ್ಧರಿಸಿದೆ. ಅಸ್ಸಾಂ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ ಅಡಿಯಲ್ಲಿ 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸುಮಾರು 22,000 ಸ್ಕೂಟಿಗಳನ್ನು ‘ಪ್ರಜ್ಞಾನ್ ಭಾರತಿ’ ಯೋಜನೆಯಡಿ ವಿತರಿಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಶೇ 25 ರಷ್ಟು ಸೀಟುಗಳನ್ನು ರಾಜ್ಯ ಮಂಡಳಿ ವಿದ್ಯಾರ್ಥಿಗಳಿಗೆ ಮೀಸಲಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೆಣ್ಣು ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕ್ ಸ್ಕೂಟಿಗೆ ಅರ್ಜಿ ಸಲ್ಲಿಸಲು ಸರ್ಕಾರವು ಅವಕಾಶ ನೀಡಿದೆ. ಪ್ರತಿ ಸ್ಕೂಟಿಗೆ ಬಜೆಟ್ 50, 000 ರಿಂದ 55, 000 ಎಂದು ನಿಗದಿಪಡಿಸಲಾಗಿದೆ.
ವರದಿಗಳ ಪ್ರಕಾರ, 2020 ರ ಅಕ್ಟೋಬರ್ 15 ರೊಳಗೆ ವಾಹನಗಳ ವಿತರಣೆ ಪೂರ್ಣಗೊಳ್ಳಲಿದೆ. ಫಲಾನುಭವಿಗಳಿಗೆ ಮೂರು ವರ್ಷಗಳ ಮೊದಲು ತಮ್ಮ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಸರ್ಕಾರಿ ಕಾಲೇಜುಗಳ ಆಸನ ಸಾಮರ್ಥ್ಯವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಸೀಟುಗಳನ್ನು ರಾಜ್ಯ ಮಂಡಳಿಯ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು.