ಕೋಲಾರ : ದುಷ್ಕರ್ಮಿಗಳು ಹೋಟೆಲ್ ಮಾಲೀಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, 1 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ನಗರದಲ್ಲಿರುವ ಹೋಟೆಲ್ ನ ಮಾಲೀಕ ನವೀಶ್ ಶೆಟ್ಟಿ ಎಂಬ ವ್ಯಕ್ತಿಯನ್ನು ಬೆಂಗಳೂರಿನ ದುಷ್ಕರ್ಮಿಗಳಾದ ಬೆಂಗಳೂರಿನ ಕೆಂಪೇಗೌಡ ನಗರದ ಮನೋಜ್ ಹಾಗೂ ಅಭಿಷೇಕ್ ತಂಡ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ, ಅವರ ಬಳಿಯಿದ್ದ 1 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಮಧು ಎಂಬ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದರು ಎನ್ನಲಾಗಿದೆ.
ಮಾಲೀಕ ಹೋಟೆಲ್ ಬಂದ್ ಮಾಡಿ ಹೋಗುವುದನ್ನು ಹಲವಾರು ದಿನಗಳಿಂದ ಗಮನಿಸಿದ್ದ ಆರೋಪಿಗಳು, ಮಧುನ ಪ್ಲಾನ್ ಮೂಲಕ ದಾಳಿ ಮಾಡಿದ್ದಾರೆ ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸೆ. 17ಕ್ಕೆ ಈ ಘಟನೆ ನಡೆದಿದ್ದು, ನವೀನ್ ಬೈಕ್ ನಿಲ್ಲಿಸಿ ಗೇಟ್ ತೆರೆಯುತ್ತಿದ್ದಂತೆ ಹಣದ ಬ್ಯಾಗ್‍ಗೆ ಕೈ ಹಾಕಿದ್ದಾರೆ. ಈ ಸಂದರ್ಭದಲ್ಲ ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ನವೀನ್ ಮಗ ಇದನ್ನು ಗಮನಿಸಿ ಕಿರುಚಿದ್ದಾನೆ. ಕೋಡಲೇ ಅಕ್ಕಪಕ್ಕದವರು ಓರ್ವನನ್ನು ಹಿಡಿದಿದ್ದಾರೆ. ಘಟನೆಯಲ್ಲಿ ಮಾಲೀಕನ ಕಣ್ಣು ಹಾಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.