ಚಾಮರಾಜನಗರ: ವರನೊಬ್ಬ(Groom) ಮದುವೆ ಶಾಸ್ತ್ರದ ಮಧ್ಯೆಯೂ ಬೂತ್ ಗೆ ತೆರಳಿ ಮತದಾನ ಮಾಡಿದ್ದಾರೆ.
ತಾಳಿ ಕಟ್ಟುವುದಕ್ಕೂ ಮುನ್ನ ಓಡೋಡಿ ಬಂದು ಹಕ್ಕು ಚಲಾಯಿಸಿ, ನಂತರ ತಾಳಿ ಕಟ್ಟಿದ್ದಾರೆ. ಈ ಘಟನೆ ಚಾಮರಾಜನಗರ (Chamarajanagar) ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.
ವಿವಾಹಕ್ಕೂ (Marriage) ಮೊದಲು ವರ ಚೇತನ್ ಮತದಾನ ಮಾಡಿ ಬೇರೆಯವರಿಗೆ ಮಾದರಿಯಾಗಿದ್ದಾರೆ. ಚೇತನ್ ಇಂದು ದೀಪಿಕಾ ಎಂಬುವವರೊಂದಿಗೆ ಮದುವೆಯಾಗಲು ಮುಂದಾಗಿದ್ದರು. 9ಕ್ಕೆ ಅವರ ಧಾರಾ ಮುಹೂರ್ತ ಇತ್ತು. ಆದರೂ ಮತದಾನ ಮಿಸ್ ಆಗಬಾರದು ಎಂಬ ಕಾರಣಕ್ಕೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಮದುವೆ ಇದ್ದರೂ ನನ್ನ ಹಕ್ಕನ್ನು ನಾನು ಮಿಸ್ ಮಾಡಿಕೊಂಡಿಲ್ಲ. ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಲೇಬೇಕು. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ಹೇಳಿದ್ದಾರೆ.