ADVERTISEMENT
Monday, June 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology : ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತದೆ…!!

Namratha Rao by Namratha Rao
March 10, 2023
in Astrology, News, Newsbeat, ಜ್ಯೋತಿಷ್ಯ
Astrology , jyotishya , horoscope
Share on FacebookShare on TwitterShare on WhatsappShare on Telegram

Astrology : ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತದೆ…!!

ಶಾಂತಿಗಳು:

Related posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

June 15, 2026
ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

June 15, 2026

ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ.

ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡ ಬೇಕು?

ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿ ಕೊಳ್ಳ ಬೇಕು.

೧. ಕೃಷ್ಣ ಚತುರ್ದಶಿ ಜನನ ಶಾಂತಿ:*
ಮಗು ಕೃಷ್ಣ ಪಕ್ಷದ ಚತುರ್ದಶಿಯ ದಿನ ಜನನವಾದಲ್ಲಿ ಅನೇಕವಾದ ಅನಿಷ್ಠ ಫಲಗಳು ಬರುತ್ತದೆ. ಚತುರ್ದಶಿ ತಿಥಿಯ ಕಾಲವನ್ನು ಆರು ಭಾಗ ಮಾಡಿ; ಒಂದನೇಯ ಭಾಗವನ್ನು ಶುಭ ಎಂತಲೂ, ಎರಡನೇಯ ಭಾಗವನ್ನು ತಂದೆಗೆ ಅನಿಷ್ಠ ಎಂತಲೂ,ಮೂರನೇಯ ಭಾಗವನ್ನು ತಾಯಿಗೆ ಅನಿಷ್ಠ ಎಂತಲೂ, ನಾಲ್ಕನೇಯ ಭಾಗವನ್ನು ಮಾವನಿಗೆ ಅನಿಷ್ಠ ಎಂದೂ, ಐದನೇಯ ಭಾಗವನ್ನು ವಂಶನಾಶ ಎಂತಲೂ,ಆರನೇಯ ಭಾಗವನ್ನು ಧನಹಾನಿ ಎಂದೂ ಶಾಸ್ತ್ರದಲ್ಲಿ ಹೇಳಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

೨. ಸಿನೀವಾಲೀ- ಕುಹೂ ಜನನ ಶಾಂತಿ:*
ಮಗುವು ಅಮಾವಾಸ್ಯೆಯ ದಿನದಂದು ಜನಿಸಿದಲ್ಲಿ, ಅಮಾವಾಸ್ಯೆಯ ಪರಮ ಘಟಿಯನ್ನು ೮ ಭಾಗವನ್ನು ಮಾಡಿ ಪ್ರಥಮ ಭಾಗ ಜನನಕ್ಕೆ ಸಿನೀವಾಲೀ, ಅಷ್ಟಮ ಭಾಗಕ್ಕೆ ಕುಹೂ ಜನನ ಎಂದೂ ಕರೆಯುತ್ತಾರೆ. ಈ ಜನನದಲ್ಲಿ ಬರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿ ಕೊಳ್ಳ ಬೇಕು.

೩. ದರ್ಶ ಜನನ ಶಾಂತಿ:*
ಅಮಾವಾಸ್ಯೆ ತಿಥಿಯ ಪರಮ ಘಟಿಯನ್ನು ಭಾಗವನ್ನಾಗಿ ಮಾಡಿದಾಗ ೨ನೇಯ ಭಾಗದಿಂದ ೬ನೇ ಭಾಗದವರೆಗೆ ಹುಟ್ಟಿದ ಮಗುವಿಗೆ ಬರುವ ದೋಷ ನಿವಾರಣೆಗೆ ದರ್ಶ ಜನನ ಶಾಂತಿ ಅಥವಾ ಅಮಾವಾಸ್ಯೆ ಜನನ ಶಾಂತಿ ಮಾಡಿಸಿ ಕೊಳ್ಳ ಬೇಕು.

೪. ಸೂರ್ಯ ಸಂಕ್ರಾಂತಿ ಜನನ ಶಾಂತಿ ಮತ್ತು ವ್ಯತಿಪಾತ, ವೈದ್ರತಿ, ಅತೀಗಂಡ, ಗಂಡಯೋಗ ಜನನ ಶಾಂತಿ*

೫. ಆಶ್ಲೇಷಾ ಜನನ ಶಾಂತಿ:*
ಮಗುವು ಆಶ್ಲೇಷಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿ ಕೊಳ್ಳ ಬೇಕು. ಮೊದಲನೇ ಪಾದ ಜನನಕ್ಕೆ ಶುಭ ಫಲ, ದ್ವಿತೀಯ ಪಾದ ಜನನಕ್ಕೆ ಧನನಾಶ, ತೃತೀಯ ಪಾದ ಜನನಕ್ಕೆ ತಾಯಿಗೆ ಅನಿಷ್ಠ.

೬. ಜ್ಯೇಷ್ಠ ನಕ್ಷತ್ರ ಜನನ ಶಾಂತಿ:*
ಮಗುವು ಜ್ಯೇಷ್ಠ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿ ಕೊಳ್ಳ ಬೇಕು. ವಿಶೇಷತಃ ೪ನೇ ಪಾದದಲ್ಲಿ ಜನಿಸಿದರೆ ತಂದೆ- ತಾಯಿಗೆ ಅನಿಷ್ಠ.

೭. ಮೂಲಾ ನಕ್ಷತ್ರ ಜನನ ಶಾಂತಿ:*
ಮಗುವು ಮೂಲಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ೧ನೇ ಪಾದಕ್ಕೆ ಅತೀ ಅನಿಷ್ಠ. ೨ನೇ ಪಾದಕ್ಕೆ ತಾಯಿಗೆ ಅನಿಷ್ಠ. ೩ನೇ ಪಾದಕ್ಕೆ ಧನನಾಶ. ೪ನೇ ಪಾದಕ್ಕೆ ಕುಲನಾಶ. ಹೆಣ್ಣು ಮಗು ಈ ನಕ್ಷತ್ರದಲ್ಲಿ ಜನಿಸಿದರೆ ಗಂಡನ ತಂದೆಗೆ ಅತೀ ಅನಿಷ್ಠ.

೮. ಗ್ರಹಣ ಜನನ ಶಾಂತಿ:*
ಮಗುವು ಸೂರ್ಯ ಅಥವಾ ಚಂದ್ರ ಗ್ರಹಣ ಕಾಲದಲ್ಲಿ ಜನಿಸಿದರೆ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿ ಕೊಳ್ಳ ಬೇಕು.

೯. ಏಕ ನಕ್ಷತ್ರ ಜನನ ಶಾಂತಿ:*
ತಾಯಿ, ತಂದೆ, ಅಣ್ಣ-ತಮ್ಮ ಎಲ್ಲರ ನಕ್ಷತ್ರ ಒಂದೇ ಆದಲ್ಲಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೧೦. ವಿಷ ಘಟಿ ಜನನ ಶಾಂತಿ:* ಮಗುವು ವಿಷ ನಾಡಿಯಲ್ಲಿ ಜನಿಸಿದರೆ ಸರ್ವರಿಷ್ಠ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೧೧. ತ್ರಿಕ ಪ್ರಸವ ಶಾಂತಿ:*
ತಾಯಿಗೆ ಏಕ ಕಾಲದಲ್ಲಿ ಮೂರು ಮಗುವಿನ ಜನನವಾದರೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೧೨. ಭದ್ರಾ ಜನನ ಶಾಂತಿ:*
ಭದ್ರಾ ಯೋಗದಲ್ಲಿ ಜನಿಸಿದ ಮಗುವಿಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು

೧೩. ಅಧೋಮುಖ ಜನನ ಶಾಂತಿ:*
ಮಗು ಜನಿಸಿವಾಗ ಕೆಳಮುಖವಾಗಿ ಜನಿಸಿದರೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೧೪. ಸದಂತ ಜನನ ಶಾಂತಿ:*
ಮಗು ಹುಟ್ಟಿದಾಗಲೇ ಹಲ್ಲು ಇದ್ದರೆ ಬರುವ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೧೫. ಯಮಳ ಜನನ ಶಾಂತಿ:*
ಏಕ ಕಾಲದಲ್ಲಿ ಎರಡು ಮಗುವಿನ ಜನನವಾದಲ್ಲಿ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೧೬. ಪ್ರಸವ ವೈಕ್ರತಿ ಜನನ ಶಾಂತಿ:*
ಮಗು ಜನಿಸುವಾಗ ಅಂಗ ವಿಕಲವಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೧೭. ದಿನ ಕ್ಷಯ, ವ್ಯತಿಪಾತ ಯೋಗಾದಿ ಜನನ ಶಾಂತಿ.*

೧೮. ಬಾಲಾರಿಷ್ಠ ಜನನ ಶಾಂತಿ:* ಮಗು ಜನಿಸಿದಾಗ ಜನ್ಮದಲ್ಲಿ ರವಿ, ಕುಜ, ಶನಿ, ರಾಹು, ಕೇತುಗಳು ವಿಷಮ ಸ್ಥಿತವಾದಲ್ಲಿ ವಿಪರೀತ ಕಷ್ಟಗಳನ್ನು ಕೊಡುತ್ತದೆ. ಈ ಕಷ್ಟಗಳ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು. ಈ ಶಾಂತಿಯನ್ನು ಮಗುವಿನ ಜನ್ಮದ ನಂತರದ ೧೨ನೆ ದಿನದ ಮೇಲೆ ಮಗು ಚಿಕ್ಕದಿದ್ದಾಗಲೆ ಮಾಡಿಸಿ ಕೊಳ್ಳುವುದು ಒಳ್ಳೆಯದು.

೧೯. ಬಾಲಗ್ರಹ ಶಾಂತಿ:*
ಮಗುವು ಪೂರ್ವ ಜನ್ಮಂತರದಲ್ಲಿ ಮಾಡಿದ ದೇವರ, ವೇದಗಳ, ಶಾಸ್ತ್ರಗಳ ಮತ್ತು ಗುರು ಹಿರಿಯರ ನಿಂದನಾದಿ ಸರ್ವ ಪಾತಕಗಳಿಂದ ಬರುವ ಪೀಡಾ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೨೦. ಬಾಲ ಮಾರ್ಕಾಂಡೇಯ ಶಾಂತಿ:*
ಮಗುವಿಗೆ ಮಹತ್ ಬಾಲಾರಿಷ್ಟ ವಶದಿಂದ ಆಯುಷ್ಯಕ್ಕೆ ಕಂಟಕ ಸೂಚಿಸಿದಲ್ಲಿ ಅನಿಷ್ಟ ಪರಿಹಾರಕ್ಕಾಗಿ ಈ ಶಾಂತಿಯನ್ನು ಮಾಡಿಸ ಬೇಕು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

೨೧. ರೋಹಿಣಿ ನಕ್ಷತ್ರ ಜನನ ಶಾಂತಿ:*
ಮಗುವು ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಮಾವನಿಗೆ ಅರಿಷ್ಟ ಸೂಚನೆ ಆಗುವುದರಿಂದ ಈ ಶಾಂತಿಯನ್ನು ಮಾಡಿಸ ಬೇಕು.

೨೨. ಕುಜ-ರಾಹು ಸಂಧಿ ಶಾಂತಿ:*
ನವಗ್ರಹದಲ್ಲಿ ಒಂದೊಂದು ಗ್ರಹಕ್ಕೆ ಇಷ್ಟು ವರ್ಷಗಳು ಮನುಷ್ಯನ ಜೀವನದಲ್ಲಿ ಅಧಿಪತ್ಯ (ಅಧಿಕಾರ) ಎಂದಿರುತ್ತದೆ. ಆದರೆ ಪರಸ್ಪರ ಶತ್ರು ಗ್ರಹಗಳ ಅಧಿಕಾರ ಅವಧಿ ಮುಗಿದು ಇನ್ನೊಂದು ಶತ್ರು ಗ್ರಹದ ಅಧಿಕಾರ ಆರಂಭ ಕಾಲದಲ್ಲಿ ೬ ತಿಂಗಳು ಮುಂಚಿತವಾಗಿ ಸಂಧಿ ಶಾಂತಿ ಮಾಡಿಸುತ್ತಾರೆ. ಇಲ್ಲಿ ಕುಜ ದಶಾ ೭ ವರ್ಷಗಳು ಮುಗಿದು ರಾಹು ದಶಾ ೧೮ ವರ್ಷಗಳು ಆರಂಭವಾಗುವ ಸಮಯಕ್ಕೆ ಈ ಶಾಂತಿಯನ್ನು ಮಾಡಿಸ ಬೇಕು. ಈ ಸಂಧಿ ಕಾಲದವಿಶೇಷವಾಗಿ ಗಂಡಸರಿಗಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ. ಆಯುಷ್ಯದಲ್ಲಿ ಒಂದು ಕಂಟಕ ಎನ್ನ ಬಹುದು.

೨೩. ರಾಹು- ಬೃಹಸ್ಪತಿ ಸಂಧಿ ಶಾಂತಿ:*
ರಾಹುವಿನ ಅಧಿಕಾರ ಅವಧಿ ೧೮ ವರ್ಷಗಳು ಕಳೆದು ಗುರುವಿನ ೧೬ ವರ್ಷದ ಅಧಿಕಾರದ ಅವಧಿ ಆರಂಭವಾಗುವ ೬ ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿ ಕೊಳ್ಳ ಬೇಕು. ಈ ಸಂಧಿಕಾಲವು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ.

೨೪. ಶುಕ್ರಾದಿತ್ಯ ಸಂಧಿ ಶಾಂತಿ:*
ಶುಕ್ರ ಅಧಿಕಾರ ಅವಧಿ ೨೦ ವರ್ಷಗಳು ಕಳೆದು ಸೂರ್ಯನ ೬ ವರ್ಷದ ಅಧಿಕಾರದ ಅವಧಿ ಆರಂಭವಾಗುವ ೬ ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿ ಕೊಳ್ಳ ಬೇಕು. ಈ ಸಂಧಿಕಾಲವು ಪುರುಷ ಮತ್ತು ಮಹಿಳೆ ಇಬ್ಬರಿಗೂ ಹಾನಿಕಾರಕ ಆಗಿರುತ್ತದೆ.

೨೫. ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ:*
ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನು ಒಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ ೬೦ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮ, ನಕ್ಷತ್ರದಲ್ಲಿ ಈ ಶಾಂತಿಯನ್ನು ಮಾಡ ಬೇಕು.
ಇದನ್ನು ಏಕೆ ಮಾಡ ಬೇಕು?
ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾಧೆ, ಛಾಯಾ ವಿಕೃತಿ. ಭೂತ-ಪ್ರೇತಾದಿ ಪೀಡಾ ರೂಪಕವಾದಂತಹ ನಾನಾ
ವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ.
ಈ ವಿಧಿಯಲ್ಲಿ ಗಣಪತಿ, ನವಗ್ರಹ ದೇವತೆಗಳನ್ನು, ಪೀಡಾ ಪರಿಹಾರಕನಾದ ಮೃತುಂಜಯನನ್ನು ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮೃತ್ಯುವನ್ನೇ ಜಯಿಸಿದ ಮಾರ್ಕೆಂಡೆಯನನ್ನು, ಆಯುರ್ದೇವತೆ ನಕ್ಷತ್ರ ದೇವತೆಗಳನ್ನು ಆರಾಧಿಸ ಬೇಕು. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನವನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯ ಬೇಕು. ಈ ವಿಧಿಯಲ್ಲಿ ಉಗ್ರನೆಂಬ ಹೆಸರಿನ ಮೃತ್ಯುಂಜಯನು ಪ್ರಧಾನ ದೇವತೆಯಾದ್ದರಿಂದ ಉಗ್ರರಥ ಶಾಂತಿ ಎಂಬ ಹೆಸರು ಬಂತು. ಈ ವಿಧಿಯ ಅಂತ್ಯದಲ್ಲಿ ಕಲಶ ತೀರ್ಥಸ್ನಾನ ಮತ್ತು ಮಂಗಳ ದ್ರವ್ಯ ದರ್ಶನ ಅಲ್ಲದೇ ಪುನಃ ಮಂಗಳ ಸೂತ್ರ ಕಟ್ಟುವುದು ಮುಖ್ಯವಾಗಿರುತ್ತದೆ

೨೮. ಗ್ರಹ ಶಾಂತಿ:*
ಮನೆಯಲ್ಲಿ ಸಾಲದ ಬಾಧೆ, ಅಶಾಂತಿ, ಕೆಟ್ಟ ಕನಸು ಮತ್ತು ರೋಗ-ರುಜಿನಗಳಿಂದ ತೊಂದರೆ ಅನುಭವಿಸುತ್ತಿದ್ದಲ್ಲಿ ಗ್ರಹ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೨೯. ವಾಸ್ತು ಶಾಂತಿ:*
ಹೊಸದಾಗಿ ತೆಗೆದು ಕೊಂಡ ಮನೆ ಅಥವಾ ವಸತಿ ಸಮುಚ್ಛಯ ನಿರ್ಮಿಸುವಾಗ ಸ್ಥಳದಲ್ಲಿ ಇರುವಂತಹ ನೂನ್ಯತೆಯನ್ನು ಹೊಗಲಾಡಿಸಿ ಸುಖ ಶಾಂತಿ, ಸಮೃದ್ಧಿಯಿಂದ ನೆಲೆಸುವುದಕ್ಕಾಗಿ ವಾಸ್ತು ಶಾಂತಿಯನ್ನು ಮಾಡುವುದು ಅಗತ್ಯ.

೩೦. ರಾಕ್ಷೋಘ್ನ ಶಾಂತಿ:*
ಹೊಸ ಮನೆಯನ್ನು ನಿರ್ಮಿಸುವಾಗ ಸ್ಥಳದಲ್ಲಿ ಉಪಯೋಗಿಸಿರುವ ಮರದ ಸಲಕರಣೆಗಳಲ್ಲಿ ಇರುವ ಭೂತ, ಪ್ರೇತ, ಪಿಶಾಚಿ ಬಾಧೆ ನಿವಾರಣೆಗಾಗಿ ವಾಸ್ತು ಹೋಮದ ಪೂರ್ವದಲ್ಲಿ ಈ ಹೋಮವನ್ನು ರಾತ್ರಿಯಲ್ಲಿ ಮಾಡ ಬೇಕು.

೩೧. ಗೇಹಾಭಿವೃದ್ಧಿ ಶಾಂತಿ:*
ದೇವಸ್ಥಾನದಲ್ಲಿ ಸ್ಥಾಪಿಸಿರುವ ವಿಗ್ರಹಕ್ಕೆ ದೇವರ ಸಾನಿಧ್ಯ ಪ್ರಾಪ್ತಿಗಾಗಿ, ದೇವಾಲಯದ ಅಭಿವೃದ್ಧಿಗಾಗಿ ಈ ಶಾಂತಿಯನ್ನು ಮಾಡ ಬೇಕು.

೩೨. ಸರ್ವಾದ್ಭುತ ಶಾಂತಿ:*
ಮನೆಯಲ್ಲಿ ಅಮಂಗಲವಾದ ಘಟನೆಗಳು ನಡೆದಾಗ; ಉದಾಹರಣೆಗೆ ಮನೆಗೆ ಬೆಂಕಿ ತಗಲುವುದು, ಮನೆಗೆ ಕಾಗೆ ಪ್ರವೇಶಿಸುವುದು, ಮನೆಯಲ್ಲಿ ಜೇನುಗೂಡು ಕಟ್ಟುವುದು ಮನೆಯ ಒಂದು ಭಾಗ ಕುಸಿಯುವುದು ಇಂತಹ ಅನಿಷ್ಠಗಳಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೩೩. ಗ್ರಾಮೊತ್ಪಾತ ಶಾಂತಿ:*
ಗ್ರಾಮದಲ್ಲಿ ಉತ್ಪನ್ನವಾಗಿರುವ ನಾನಾವಿಧ ಭಾದೆ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೩೪. ರಕ್ತ ವಲ್ಮೀಕ ಶಾಂತಿ:*
ದೇವಾಲಯದಲ್ಲಿ, ಮನೆಯಲ್ಲಿ ಅಥವಾ ಸಭಾಸ್ಥಾನದಲ್ಲಿ ಉತ್ಪತ್ತಿಯಾಗಿರುವ ಹುತ್ತವು ಅಶುಭ ಸೂಚಕ ಆಗಿರುವುದರಿಂದ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೩೫. ವಾನರ ಪ್ರವೇಶ ಶಾಂತಿ:*
ಮನೆಯೊಳಗೆ ವಾನರ ಪ್ರವೇಶವಾದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.

೩೬. ಮರ್ಕಟ ಪ್ರವೇಶ ಶಾಂತಿ:*
ಮನೆಯೊಳಗೆ ಕೃಷ್ಣಮುಖ ವಾನರ ಪ್ರವೇಶ ಆದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.

೩೭. ಮಹಿಷಿ ಪ್ರವೇಶ ಶಾಂತಿ:*
ಮನೆಯೊಳಗೆ ಎಮ್ಮೆ ಅಥವಾ ಕೋಣ ಪ್ರವೇಶಿಸಿದರೆ ಸೂಚಿತ ಅಪಮೃತ್ಯು ಹಾಗೂ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.

೩೮. ದೀಪ ಪತನ ಶಾಂತಿ: ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಉರಿಯುತ್ತಿರುವ ದೀಪ ಆರಿ ಹೋದಲ್ಲಿ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.

೩೯. ಭೀತಿಹರ ದಕ್ಷಾಕರ ದುರ್ಗಾ ಶಾಂತಿ:*
ಗ್ರಹ ಪೀಡೆಗಳಿಂದ ಪುನಃ ಪುನಃ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೪೦. ಅನಾವೃಷ್ಟಾದಿ ಶಾಂತಿ:*
ಇದನ್ನು ಸಾಮೂಹಿಕವಾಗಿ ಉತ್ಪತ್ತಿಯಾಗಿರುವ ಮಹಾಮಾರಿ, ಪಶುರೋಗಾದಿ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೪೧. ಕೃತ್ಯಾದ್ರೋಹ ಶಾಂತಿ:*
ವಿರೋಧಿಗಳ ಯಾವುದೇ ಕುಟುಂಬ, ಉದ್ಯಮ, ಕೋಷ್ಠಗಳ ಮೇಲೆ ಮಾಡಿದ ಕೃತ್ರಿಮ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.

೪೨. ದುಃಸ್ವಪ್ನ ಶಾಂತಿ:* ಕೆಲವೊಂದು ಸ್ವಪ್ನಗಳು ಅಮಂಗಲತೆಯ ಮುನ್ಸೂಚನೆ ಆಗಿರುವುದರಿಂದ ಈ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

೪೩. ಪರ್ಜನ್ಯ ಶಾಂತಿ:*
ದೇಶದ ಅಥವಾ ಯಾವುದೇ ಪ್ರಾಂತದಲ್ಲಿ ಸಕಾಲದಲ್ಲಿ ಮಳೆ ಆಗದಿದ್ದಲ್ಲಿ ಜೀವಿಗಳಿಗೆ ಅತಿ ಆತಂಕ ಆಗುವುದು. ಆ ಪರಿಸ್ಥಿತಿ ನಿವಾರಣೆಗೆ ಪ್ರಕೃತಿ ದೇವಿಯನ್ನು ಶಾಂತಿಗೊಳಿಸಿ ಮಳೆ ಪಡೆಯುವುದಕ್ಕೆ ಈ ಶಾಂತಿ ಹೆಸರಿದೆ.

೪೪. ಸರ್ವ ವ್ಯಾಧಿಹರ ನಾಮತ್ರಯೀ ಶಾಂತಿ:*
ಜನ್ಮ ಜನ್ಮಾಂತರಗಳಿಂದ ಸಂಚಿತ ಪ್ರಾರಾಬ್ಧ ರೂಪ, ಪಾಪ, ನಿವೃತ್ತಿ ಮತ್ತು ವ್ಯಾಧಿ ಬಾಧೆ ನಿವಾರಣೆಗಾಗಿ ಮತ್ತು ಆಯುಃ ಆರೋಗ್ಯ ಪ್ರಾಪ್ತಿಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೪೫. ನಾಳವೇಷ್ಟನ ಶಾಂತಿ:*
ಮಗುವಿನ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಆಹಾರಾದಿಗಳನ್ನು ಕೊಡುವ ನಾಳವು ಕಂಠ, ಕೈ, ಕಾಲುಗಳಿಗೆ ಸುತ್ತಿಕೊಂಡು ಜನಿಸಿದರೆ ತಂದೆ, ತಾಯಿಗೆ ಅನಿಷ್ಟ, ಸಂಪತ್ತು ನಾಶ, ಸರ್ವ ನಾಶ ಎಂದಿರುತ್ತದೆ. ಆದ್ದರಿಂದ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡ ಬೇಕು.

೪೬. ವಿಶಾಖಾ ನಕ್ಷತ್ರ ಜನನ ಶಾಂತಿ:*
ವಿಶೇಷವಾಗಿ ಮಗುವು ವಿಶಾಖಾ ನಕ್ಷತ್ರದ ೪ನೇ ಚರಣದಲ್ಲಿ ಜನಿಸಿದರೆ ತಂದೆ, ತಾಯಿ, ಬಂಧುಗಳಿಗೆ ವಿವಾಹದ ನಂತರ ವರನ ಸಹೋದರರಿಗೂ ಅನಿಷ್ಟ ಆದ್ದರಿಂದ ಶಾಂತಿಯ ಅಗತ್ಯವಿದೆ. ೧, ೨, ೩ ಚರಣಗಳಿಗೆ ಅಗತ್ಯವಿಲ್ಲ.

೪೭. ಯೋನಿ ವೈಕೃತಿ ಶಾಂತಿ:*
ಒಂದು ಹೆಣ್ಣು ಮಗಳು ಮೊದಲನೇ ಬಾರಿಗೆ ರಜೋ ದರ್ಶನವಾಗಿ (ಮಾಸಿಕ ರಜೆ) ನಂತರ ೬ ತಿಂಗಳವರೆಗೆ ರಜೋ ದರ್ಶನ ಆಗದಿದ್ದಲ್ಲಿ ಮುಂದೆ ಮದುವೆಯಾದ ಮೇಲೆ ಬರುವಂತಹ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೪೮. ಪ್ರಪೌತ್ರ ದರ್ಶನ ಶಾಂತಿ:*
ಒಂದು ವೇಳೆ ನಮ್ಮ ಮಗನಿಗೆ ಮಗನು ಜನಿಸಿ,ಅವನಿಗೆ ಮಗನು ಜನಿಸಿದಾಗ ನಾವು ಪ್ರಪೌತ್ರವನ್ನು ಪಡೆದಂತೆ.ಈ ಪ್ರಪೌತ್ರ ದರ್ಶನವು ಮುತ್ತಜ್ಜನಿಗೆ ಒಳ್ಳೆಯದಲ್ಲ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.

೪೯. ಕುಂಭ ವಿವಾಹ ಶಾಂತಿ:*
ಒಂದು ವೇಳೆ ಯುವತಿಯ ಕುಂಡಲಿಯಲ್ಲಿ ವೈಧವ್ಯ ಯೋಗವಿದ್ದಾಗ ಅಥವಾ ಎರಡು ಇಲ್ಲವೇ ಮೂರು ವಿವಾಹ ಯೋಗವಿದ್ದಲ್ಲಿ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡಿಸುವುದು ಉತ್ತಮ.

೫೦. ಕದಳಿ ವಿವಾಹ ಶಾಂತಿ:*
ಈ ವಿಧಿಯನ್ನು ಸಹ ಮೇಲೆ ಕಾಣಿಸಿದ ದೋಷ ನಿವಾರಣೆಗೆ ಮಾಡಿಸಲಾಗುತ್ತದೆ.

೫೧. ಅರ್ಕ ವಿವಾಹ ಶಾಂತಿ:*
ಒಂದು ವೇಳೆ ಯುವಕನ ಜಾತಕದಲ್ಲಿ ಮೊದಲನೇಯ ವಿವಾಹವಾಗಿ ಆತನ ಪತ್ನಿಯು ಪತಿಯನ್ನು ತ್ಯಜಿಸಿದಾಗ ಇಲ್ಲವೇ ಮರಣ ಹೊಂದಿದಾಗ ಅದೇ ರೀತಿ ಎರಡನೇಯ ವಿವಾಹವು ಇದೇ ರೀತಿಯಾದಲ್ಲಿ ಮೂರನೇಯ ವಿವಾಹವಾಗುವ ಮುನ್ನ ಈ ಶಾಂತಿಯನ್ನು ಮಾಡಿಸಿ ಕೊಂಡು ವಿವಾಹವಾಗ ಬೇಕು.

ಹೀಗೆ ಅನೇಕ ವಿಧವಾದ ಶಾಂತಿ, ಹೋಮ,ಯಜ್ಞಾದಿಗಳು ಇರುತ್ತಿದ್ದು ಅವುಗಳನ್ನು ಜ್ಯೋತಿಷಿಗಳ ಅಥವಾ ಪುರೋಹಿತರ ಸಲಹೆ ಅಗತ್ಯ.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564

ಶ್ರೀ ಹರಿ.

Tags: #astrologyhoroscopejyotishya
ShareTweetSendShare
Join us on:

Related Posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

by Shwetha
June 15, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಲ್ಲಿ ನೂರಾರು ಕೋಟಿ ರೂಪಾಯಿ ಸೋರಿಕೆ ಮತ್ತು ದುರ್ಬಳಕೆಯಾಗಿರುವುದು ಪತ್ತೆಯಾಗಿದ್ದು, ಇದನ್ನು ತಡೆಯಲು ಸರ್ಕಾರ ಈಗ...

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

by Shwetha
June 15, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದು, ಗೃಹಲಕ್ಷ್ಮಿ ಯೋಜನೆಯನ್ನು ಚುನಾವಣಾ ಲಕ್ಷ್ಮಿ...

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

by Shwetha
June 15, 2026
0

ಬಾಗಲಕೋಟೆ: ಅನ್ನದಾತನ ತಾಳ್ಮೆಯ ಕಟ್ಟೆ ಒಡೆದರೆ ಏನಾಗುತ್ತದೆ ಎಂಬುದಕ್ಕೆ ಬಾಗಲಕೋಟೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿ ಪಡೆದು, ದಶಕಗಳ ಕಾಲ ಪರಿಹಾರ ನೀಡದೆ...

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

by Shwetha
June 15, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ನೀಡುವ ಮತ್ತು ಲಂಚ ಕೇಳುವ...

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

by Shwetha
June 15, 2026
0

ಬೆಂಗಳೂರು: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಸರ್ಕಾರದ ನಡೆಗಳ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram