ಭೂಕಂಪದಿಂದಾಗಿ ನೇಪಾಳದಲ್ಲಿ 6 ಮಂದಿ ಮೃತ – ಉತ್ತರ ಭಾರತದಾದ್ಯಂತ ಕಂಪನದ ಅನುಭವ…
ಬುಧವಾರ ಮುಂಜಾನೆ ಉತ್ತರ ಭಾರತ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಪ್ರಬಲವಾದ ಭೂ ಕಂಪನ ಸಂಭವಿಸಿದ ಅನುಭವಗಳಾಗಿದೆ. 6.3 ತೀವ್ರತೆಯಲ್ಲಿ ನೇಪಾಳದ ಗಡಿಯುದ್ದಕ್ಕೂ ಸೇರಿದಂತೆ ಉತ್ತರಾಖಂಡ್ ನ ಪಿಥೋರಗಢ್ ಬಳಿಯ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದೆ, ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, ಮತ್ತು ಐವರು ಗಾಯಗೊಂಡಿದ್ದಾರೆ.
ನಸುಕಿನ 1.57ಕ್ಕೆ ಸಂಭವಿಸಿದ 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದು ಪಿಥೋರಗಢ್‌ನಿಂದ ಪೂರ್ವ-ಆಗ್ನೇಯಕ್ಕೆ 90 ಕಿಮೀ ದೂರದಲ್ಲಿರುವ ನೇಪಾಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಭೂಕಂಪದ ಸಮಯದಲ್ಲಿ ಕುಸಿದ ಮನೆಗಳ ಅವಶೇಷಗಳಿಂದ 6 ಮೃತ ದೇಹಗಳನ್ನ ಹೊರತೆಗೆಯಲಾಗಿದೆ.
ದೆಹಲಿ ಮತ್ತು ಗಾಜಿಯಾಬಾದ್ ಮತ್ತು ಗುರುಗ್ರಾಮ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಲಕ್ನೋದಲ್ಲಿ ಕಂಪನದ ಅನುಭವವಾಗಿದೆ. ಜನರು ನಿದ್ರೆಯಿಂದ ಎದ್ದು ಮನೆ ಹೊರಗಡೆ ಬಂದಿದ್ದಾರೆ.
ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನಗಳು ಸಂಭವಿಸುತ್ತಿದ್ದಂತೆ ಹಲವಾರು ಜನರು ತಮ್ಮ ಮನೆಗಳಿಂದ ಹೊರಗೆ ಧಾವಿಸಿದರು. ಉತ್ತರಾಖಂಡದ ಹಿಮಾಲಯ ಪ್ರದೇಶ ಮತ್ತು ನೇಪಾಳದ ಪಕ್ಕದಲ್ಲಿ ಕಳೆದೆರಡು ದಿನಗಳಿಂದ ಕಡಿಮೆ ಪ್ರಮಾಣದ ಭೂಕಂಪಗಳು ಸಂಭವಿಸುತ್ತಿವೆ.
At least 6 dead as 6.3-magnitude earthquake hits Nepal; tremors felt across north India








