ಅಥಣಿಯಲ್ಲಿ ಅಂತರ್ ಜಿಲ್ಲಾ ಮದ್ಯಕಳ್ಳರ ಬಂಧನ

1 min read
athani

athani ಅಥಣಿಯಲ್ಲಿ ಅಂತರ್ ಜಿಲ್ಲಾ ಮದ್ಯಕಳ್ಳರ ಬಂಧನ

ಅಥಣಿ : ಅಂತರ್ ಜಿಲ್ಲಾ ಮದ್ಯ ಕಳ್ಳರನ್ನ ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜು, ಸಂಜು, ಉಮೇಶ್, ರಾಮಚಂದ್ರ, ಶಿದ್ದರಾಮ್, ಜಯವಂತ್, ಆಕಾಶ, ಸುನಿಲ್, ಮಾಂತೇಶ್, ಶಿವಾನಂದ ಸೇರಿದಂತೆ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ವಾರದ ಹಿಂದೆ ಅಥಣಿ ಹೊರವಲಯದಲ್ಲಿ ವೆಂಕಟೇಶ್ವರ ಬಾರ್ ನಲ್ಲಿ ಕಳ್ಳತನ ಮಾಡಿದ್ದರು.

ಇವರ ವಿರುದ್ಧ ಅಥಣಿ, ಕುಡಚಿ, ಹಾರೂಗೇರಿ ಮತ್ತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಕಳ್ಳತನದ ಏಳು ಪ್ರಕರಣಗಳು ದಾಖಲಾಗಿವೆ.

athani

ಆರೋಪಿತರಿಂದ ಕಳುವಾದ ಒಟ್ಟು ಸುಮಾರು ರೂ. 145000/- ಬೆಲೆ ಬಾಳುವ ಸರಾಯಿ, ಒಂದು ಕಾರು, ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಎಸ್ ಪಿ ಲಕ್ಷ್ಮಣ್ ನಿಂಬರಗಿ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ ಪಿ ಎಸ್.ವಿ.ಗಿರೀಶ್, ಸಿಪಿಐ ಶಂಕರಗೌಡ ಬಸವನಗೌಡರ, ಪಿಎಸ್ ಐ ಕುಮಾರ್ ಹಾಡ್ಕರ ಮತ್ತು ಶಿವರಾಜ್ ನಾಯಕವಾಡೆ ಹಾಗೂ ಸಿಬ್ಬಂದಿ ವರ್ಗದವರನ್ನೊಳಗೊಂಡ ತನಿಖಾ ತಂಡದ ಕಾರ್ಯಚರಣೆ ಇದಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd