400 ಕೋಟಿ ಕಪ್ಪು ಹಣ ಪತ್ತೆ : ಎಲ್ಲಿ.. ಹೇಗೆ.. ಗೊತ್ತಾ..?
ನವದೆಹಲಿ : ಪಾನ್ ಮಸಾಲಾ ತಯಾರಿಕಾ ಸಮೂಹದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಯಾವುದೇ ದಾಖಲೆ ಇಲ್ಲದೇ 400 ಕೋಟಿ ರು.ಗಿಂತಲೂ ಅಧಿಕ ಮೊತ್ತದ ವಹಿವಾಟು ನಡೆಸಿರುವುದನ್ನು ಪತ್ತೆ ಹಚ್ಚಿದೆ.
ಆದಾಯ ತೆರಿಗೆ ಇಲಾಖೆ ಕಾನ್ಪುರ, ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಕೋಲ್ಕತಾ ಸೇರಿದಂತೆ ಸುಮಾರು 31 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ಪ್ರಾಥಮಿಕ ತನಿಖೆಯ ವೇಳೆ 400 ಕೋಟಿ ರು. ಕಪ್ಪು ಹಣವನ್ನು ಪತ್ತೆ ಮಾಡಿದೆ.
ಈ ಹಣವನ್ನು ಪಾನ್ ಮಸಾಲಾ ಪದಾರ್ಥಗಳ ಅಕ್ರಮ ಮಾರಾಟ ಮತ್ತು ಅನಧಿಕೃತ ರಿಯಲ್ ಎಸ್ಟೆ ಟ್ ದಂಧೆಯ ಮೂಲಕ ಗಳಿಸರಬಹುದು ಎಂದು ಹೇಳಲಾಗುತ್ತಿದೆ.
ಅಲ್ಲದೆ ದಾಳಿಯ ವೇಳೆ 52 ಲಕ್ಷ ರು. ನಗದು ಹಾಗೂ 7 ಕೆಜಿ ಚಿನ್ನ ಲಭ್ಯವಾಗಿದೆ. ಸದ್ಯ ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.