ಬೆಂಗಳೂರು: ಹನುಮಾನ್ ಚಾಲಿಸ್ ಹಾಕಿದ್ದಕ್ಕೆ ಹಲ್ಲೆ ಮಾಡಿರುವ ಆರೋಪಿಗಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ನಗರ್ತಪೇಟೆಯ ಎಂಜೆ ರಸ್ತೆಯಲ್ಲಿ ತನ್ನ ಮೊಬೈಲ್ ಶಾಪ್‍ನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಮುಸ್ಲಿಂ ಯುವಕರ ಗುಂಪು ಗಲಾಟೆ ನಡೆಸಿತ್ತು. ಶಾಪ್ ಮಾಲಿಕ ಮುಕೇಶ್ ಮೇಲೆ ಮರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಹಲಸೂರು ಗೇಟ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ಬೆನ್ನಲ್ಲೇ ಬಿಜೆಪಿ ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಚಾರ್, ಸಿಕೆ ರಾಮಮೂರ್ತಿ ಸೇರಿದಂತೆ ಅನೇಕರು ಮೊಬೈಲ್ ಶಾಪ್‍ಗೆ ಭೇಟಿ ನೀಡಿ, ಹಲ್ಲೆಗೆ ಒಳಗಾಗಿರುವ ಮುಕೇಶ್ ಆರೋಗ್ಯ ವಿಚಾರಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ, ನಾಳೆ ವೇಳೆಗೆ ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸದಿದ್ದರೆ ನಗರ್ತಪೇಟೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಹಲ್ಲೆ ಮಾಡಿರುವ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.