ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಬಗೆ ಬಗೆಯ ರೀತಿಯಲ್ಲಿ ಚನ್ನ ಸಾಗಿಸುವ ವಿಷಯಗಳನ್ನು ನಾವು ಕೇಳುತ್ತಲೇ ಇದ್ದವೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮಾತ್ರೆಯಲ್ಲಿ ಚಿನ್ನ ಸಾಗಾಟಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಹೀಗೆ ಸಾಗಾಟ ಮಾಡುತ್ತಿದ್ದ ಐವರನ್ನು ಬೆಂಗಳೂರು ವಿಮಾನ ನಿಲ್ದಾಣದ (Airport) ದಲ್ಲಿ ಏರ್ ಕಸ್ಟಮ್ಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ ಬರೋಬ್ಬರಿ 3.9 ಕೋಟಿ ರೂ. ಮೌಲ್ಯದ 5.135 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಮಾತ್ರೆಗಳ ರೂಪದಲ್ಲಿ ಒಳ ಉಡುಪು ಹಾಗೂ ಮಹಿಳೆಯರ ಪರ್ಸ್ಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುವೈತ್, ದುಬೈ, ಶಾರ್ಜಾ, ಮತ್ತು ಬ್ಯಾಂಕಾಕ್ನಿಂದ ಬೆಂಗಳೂರು (Bengaluru) ಇವರು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಪರಿಶೀಲನೆ ನಡೆಸಿದಾಗ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.