ADVERTISEMENT
Sunday, September 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

AUS v AFG: ಮ್ಯಾಕ್ಸ್‌ವೆಲ್‌ ದ್ವಿಶತಕದ ಅಬ್ಬರ: ಬಿಗ್‌ ಶೋ ಆಟಕ್ಕೆ ಕ್ರಿಕೆಟ್‌ ದೇವರ ಮೆಚ್ಚುಗೆ

C Dinesh by C Dinesh
November 8, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Glenn Maxwell

Glenn Maxwell

Share on FacebookShare on TwitterShare on WhatsappShare on Telegram

ಅಫ್ಘಾನಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅಬ್ಬರದ ದ್ವಿಶತಕ ಸಿಡಿಸಿ ಮಿಂಚಿದ ಆಸ್ಟ್ರೇಲಿಯಾದ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅದ್ಭುತ ಬ್ಯಾಟಿಂಗ್‌ಗೆ ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರ ಜೊತೆಗೆ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೋಲಿನ ಆತಂಕದ ನಡುವೆಯೂ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌(201* ರನ್‌, 128 ಬಾಲ್‌, 21 ಬೌಂಡರಿ, 10 ಸಿಕ್ಸ್‌) ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದರು. ಸ್ಟಾರ್‌ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಈ ಪ್ರದರ್ಶನದಿಂದ ಅಫ್ಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ರೋಚಕ ಜಯ ಸಾಧಿಸಲು ಸಾಧ್ಯವಾಯಿತು.

Glenn Maxwell

ಅಫ್ಘಾನಿಸ್ತಾನ ನೀಡಿದ 292 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡಿದ ಆಸೀಸ್‌ 18.3 ಓವರ್‌ಗಳಲ್ಲಿ 91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸಿ, ಅಫ್ಘಾನ್‌ ಆಟಗಾರರಷ್ಟೇ ಅಲ್ಲದೇ ಕ್ರಿಕೆಟ್‌ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದರು. ಸ್ಪೋಟಕ ಬ್ಯಾಟಿಂಗ್‌ನಿಂದ ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್‌ ಮಳೆಯನ್ನೇ ಹರಿಸುವ ಮೂಲಕ ಕ್ರಿಕೆಟ್‌ ಇತಿಹಾಸದಲ್ಲೇ ಅವಿಸ್ಮರಣೀಯ ಆಟವಾಡಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಈ ಅದ್ಭುತ ಬ್ಯಾಟಿಂಗ್‌ ಪ್ರದರ್ಶನಕ್ಕೆ ಕ್ರಿಕೆಟ್‌ ಅಭಿಮಾನಿಗಳಷ್ಟೇ ಅಲ್ಲದೇ, ಮಾಜಿ ಕ್ರಿಕೆಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Glenn Maxwell

ಪ್ರಮುಖವಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌, ಡ್ಯಾಶಿಂಗ್‌ ಓಪನರ್‌ ವಿರೇಂದ್ರ ಸೆಹ್ವಾಗ್‌, ಪಾಕಿಸ್ತಾನ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್‌ ಅವರುಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್‌ ಇಬ್ರಾಹಿಂ ಝದ್ರಾನ್‌(129*) ಅವರ ಶತಕ ಹಾಗೂ ಮ್ಯಾಕ್ಸ್‌ವೆಲ್‌(201*) ಅವರ ಭರ್ಜರಿ ದ್ವಿಶತಕದ ಬಗ್ಗೆ ಟ್ವೀಟ್‌ ಮೂಲಕ ಕೊಂಡಾಡಿದ್ದಾರೆ.

Related posts

karnataka-throwball-teams-win-three-gold-medals-at-7th-national-tournament-guntur-2026

ರಾಷ್ಟ್ರೀಯ ತ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭರ್ಜರಿ ಸಾಧನೆ

September 18, 2026
ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

September 18, 2026

https://twitter.com/sachin_rt/status/1721935549504864621
“ಅಫ್ಘಾನಿಸ್ತಾನವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಲು ಝದ್ರಾನ್‌ ಅವರ ಅದ್ಭುತ ಇನ್ನಿಂಗ್ಸ್‌ ಕಾರಣವಾದರೆ. 2ನೇ ಇನ್ನಿಂಗ್ಸ್‌ನಲ್ಲಿ ಸಹ ಉತ್ತಮ ಆರಂಭ ಪಡೆದರು ಮತ್ತು 70 ಓವರ್‌ಗಳವರೆಗೆ ಉತ್ತಮ ಕ್ರಿಕೆಟ್ ಆಡಿದರು. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರ ಕೊನೆಯ 25 ಓವರ್‌ಗಳಲ್ಲಿ ಅಫ್ಘಾನಿಸ್ತಾನದ ಅದೃಷ್ಟವನ್ನು ಬದಲಾಯಿಸಿದರು. ಒತ್ತಡದ ನಡುವೆ ಮ್ಯಾಕ್ಸ್ ಅವರ ಶ್ರೇಷ್ಠ ಪ್ರದರ್ಶನ! ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ODI ಪ್ರದರ್ಶನ” ಎಂದು ಸಚಿನ್‌ ಟ್ವೀಟ್‌ ಮಾಡಿದ್ದಾರೆ.

https://twitter.com/virendersehwag/status/1721932436408340569
“ರನ್-ಚೇಸ್‌ನಲ್ಲಿ 200, ಮ್ಯಾಕ್ಸ್‌ವೆಲ್‌ ಅವರ ಸಾರ್ವಕಾಲಿಕ ಶ್ರೇಷ್ಠ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಮ್ಯಾಕ್ಸ್‌ವೆಲ್‌ ಅವರಿಗೆ ಕಮ್ಮಿನ್ಸ್‌ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಇದು ದೀರ್ಘಕಾಲ ನೆನಪಿನಲ್ಲಿ ಉಳಿಯುವ ಇನ್ನಿಂಗ್ಸ್” ಎಂದು ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ. ಸಚಿನ್‌ ಹಾಗೂ ಸೆಹ್ವಾಗ್‌ ಅವರೊಂದಿಗೆ ವಾಸಿಂ ಅಕ್ರಮ್‌, ಬೆನ್‌ ಸ್ಟೋಕ್ಸ್‌, ಗೌತಮ್‌ ಗಂಭೀರ್‌, ಹರ್ಷ ಬೋಗ್ಲೆ ವಾಸಿಂ ಜಾಫರ್‌ ಸೇರಿದಂತೆ ಇನ್ನೂ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

AUS v AFG, Afghanistan, Glenn Maxwell, World Cup, ODI Cricket

Tags: AfghanistanAUS v AFGGlenn MaxwellODI cricketWorld Cup
ShareTweetSendShare
Join us on:

Related Posts

karnataka-throwball-teams-win-three-gold-medals-at-7th-national-tournament-guntur-2026

ರಾಷ್ಟ್ರೀಯ ತ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭರ್ಜರಿ ಸಾಧನೆ

by admin
September 18, 2026
0

ಮೂರು ವಿಭಾಗಗಳಲ್ಲೂ ಚಿನ್ನದ ಪದಕ – ಕರ್ನಾಟಕಕ್ಕೆ ಹೆಮ್ಮೆಯ ಗೆಲುವು ಗುಂಟೂರು: ಆಂಧ್ರಪ್ರದೇಶದ ಗುಂಟೂರಿನ ಆಂಧ್ರ ಪ್ರದೇಶ್ STEM ಸ್ಕೂಲ್‌ನಲ್ಲಿ ಸೆಪ್ಟೆಂಬರ್ 11 ಮತ್ತು 12ರಂದು ನಡೆದ...

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

by Shwetha
September 18, 2026
0

ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಮಹತ್ವದ ಬದಲಾವಣೆಯೊಂದು ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯದ ಹಂತಕ್ಕೆ ತಲುಪಿದ್ದು,...

dbipuc-volleyball-team-runner-up-aikyam-cup-2026-27

AIKYAM CUP 2026–27 –  ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ

by admin
September 8, 2026
0

AIKYAM CUP 2026–27 -  ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ ಬೆಂಗಳೂರು: ಇಂದಿರಾನಗರದ ಜೈನ್ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ AIKYAM CUP 2026–27 ವಾಲಿಬಾಲ್...

aravinda-avengers-wins-bz-cup-media-cricket-trophy

ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ

by admin
September 7, 2026
0

ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...

bizd-cup-media-cricket-tournament-bengaluru-gkvk-ground-zameer-ahmed-khan

ಜಿಕೆವಿಕೆ ಮೈದಾನದಲ್ಲಿ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಹಬ್ಬ: ಜಮೀರ್ ಅಹ್ಮದ್ ಖಾನ್‌ರಿಂದ ಚಾಲನೆ

by admin
September 5, 2026
0

ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ 9 ಡ್ರಿಮ್ಸ್‌ ಸಂಸ್ಥೆ ಆಯೋಜಿಸಿರು ಬಿಝಡ್‌ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿಗೆ ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ಚಾಲನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram