ADVERTISEMENT
Monday, July 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

AUS v NZ: ಟ್ರಾವಿಸ್‌ ಹೆಡ್‌ ಶತಕದ ಅಬ್ಬರ: ಕಿವೀಸ್‌ಗೆ 389 ರನ್‌ಗಳ ಟಾರ್ಗೆಟ್‌ ನೀಡಿದ ಆಸೀಸ್‌

C Dinesh by C Dinesh
October 28, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Head and Warner

Head and Warner

Share on FacebookShare on TwitterShare on WhatsappShare on Telegram

ಟ್ರಾವಿಸ್‌ ಹೆಡ್‌(109) ಅವರ ಭರ್ಜರಿ ಶತಕ, ಡೇವಿಡ್‌ ವಾರ್ನರ್‌(81) ಅವರ ಅರ್ಧಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿ಼ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 388 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿತು. ಇದರ ಪರಿಣಾಮ 49.2 ಓವರ್‌ಗಳಲ್ಲಿ 388/10 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಆಸೀಸ್‌ ಪರ ಟ್ರಾವಿಸ್‌ ಹೆಡ್‌(109), ವಾರ್ನರ್‌(81), ಮ್ಯಾಕ್ಸ್‌ವೆಲ್‌(41), ಇಂಗ್ಲಿಸ್‌(38) ಹಾಗೂ ಕಮ್ಮಿನ್ಸ್‌(37) ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಆಸರೆಯಾದರು.

Related posts

jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

July 26, 2026
devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

July 25, 2026

Travis Head

ಹೆಡ್‌-ವಾರ್ನರ್‌ ಅದ್ಭುತ ಆಟ:
ಆಸ್ಟ್ರೇಲಿಯಾ ಪರ ಇನ್ನಿಂಗ್ಸ್‌ ಆರಂಭಿಸಿದ ಡೇವಿಡ್‌ ವಾರ್ನರ್‌(81 ರನ್‌, 65 ಬಾಲ್‌, 5 ಬೌಂಡರಿ, 6 ಸಿಕ್ಸ್‌) ಹಾಗೂ ಟ್ರಾವಿಸ್‌ ಹೆಡ್‌(109 ರನ್‌, 67 ಬಾಲ್‌, 10 ಬೌಂಡರಿ, 7 ಸಿಕ್ಸ್‌) ಅದ್ಭುತ ಆಟವಾಡಿದರು. ಇನ್ನಿಂಗ್ಸ್‌ನ ಆರಂಭದಿಂದಲೇ ನ್ಯೂಜಿ಼ಲೆಂಡ್‌ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿದ ಈ ಜೋಡಿ 19.1 ಓವರ್‌ಗಳಲ್ಲಿ 175 ರನ್‌ಗಳ ಅತ್ಯುತ್ತಮ ಆರಂಭಿಕ ಜೊತೆಯಾಟದಿಂದ ತಂಡಕ್ಕೆ ಸುಭದ್ರ ಅಡಿಪಾಯ ಹಾಕಿಕೊಟ್ಟರು. ಕಿವೀಸ್‌ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ ಟ್ರಾವಿಸ್‌ ಹೆಡ್‌, ತಮ್ಮ ಚೊಚ್ಚಲ ಏಕದಿನ ವಿಶ್ವಕಪ್‌ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದರು.

Glenn Maxwell

ಆಸೀಸ್‌ ಅಬ್ಬರದ ಬ್ಯಾಟಿಂಗ್‌:
ವಾರ್ನರ್‌ ಹಾಗೂ ಹೆಡ್‌ ಅವರು ನೀಡಿದ ಉತ್ತಮ ಆರಂಭದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಆಸೀಸ್‌ನ ಇತರೆ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ಪ್ರಮುಖವಾಗಿ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌(41), ಜೋಶ್‌ ಇಂಗ್ಲಿಸ್‌(38), ನಾಯಕ ಪ್ಯಾಟ್‌ ಕಮ್ಮಿನ್ಸ್‌(37) ಹಾಗೂ ಮಿಚೆಲ್‌ ಮಾರ್ಷ್‌(36) ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ಆದರೆ ಪ್ರಮುಖ ಬ್ಯಾಟರ್‌ಗಳಾದ ಸ್ಟೀವ್‌ ಸ್ಮಿತ್‌(18) ಹಾಗೂ ಮಾರ್ನಸ್‌ ಲಬುಶೇನ್‌(18) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಬಳಿಕ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ಕ್‌(1), ಜ್ಹಂಪ(0) ಹಾಗೂ ಹೇಜ಼ಲ್ವುಡ್‌(0*) ನಿರೀಕ್ಷಿತ ಆಟವಾಡದ ಪರಿಣಾಮ 49.2 ಓವರ್‌ಗಳಲ್ಲಿ 388 ರನ್‌ಗಳಿಗೆ ಆಲೌಟ್‌ ಆಯಿತು.

Glenn Phillips

ಫಿಲಿಪ್ಸ್‌ ಉತ್ತಮ ದಾಳಿ:
ಕಿವೀಸ್‌ ಪರ ಗ್ಲೆನ್‌ ಫಿಲಿಪ್ಸ್‌(3/37) ಹಾಗೂ ಟ್ರೆಂಟ್‌ ಬೋಲ್ಟ್‌(3/77) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರೆ. ಸ್ಯಾಂಟ್ನರ್‌ 2, ಹೆನ್ರಿ ಹಾಗೂ ನೀಶಮ್‌ ತಲಾ 1 ವಿಕೆಟ್‌ ಪಡೆದುಕೊಂಡರು. ಪ್ರಸಕ್ತ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಜೊತೆಗೆ ಫೀಲ್ಡಿಂಗ್‌ನಲ್ಲೂ ಮಿಂಚಿದ್ದ ನ್ಯೂಜಿ಼ಲೆಂಡ್‌, ಇಂದಿನ ಪಂದ್ಯದಲ್ಲಿ ಫೀಲ್ಡಿಂಗ್‌ನಲ್ಲಿ ದೊಡ್ಡ ವೈಫಲ್ಯ ಕಂಡಿತು. ಆಸೀಸ್‌ ತಂಡದ ಪ್ರಮುಖ ಬ್ಯಾಟರ್‌ಗಳ ನಾಲ್ಕು ಕ್ಯಾಚ್‌ಗಳನ್ನ ಕೈಚಲ್ಲಿದ್ದು ಕಿವೀಸ್‌ಗೆ ದೊಡ್ಡ ಹೊಡೆತ ನೀಡಿತು.

AUS v NZ, Australia, New Zealand, CWC 2023, ODI Cricket

Tags: AUS v NZAustraliaCWC 2023New ZealandODI cricket
ShareTweetSendShare
Join us on:

Related Posts

jandu-kumar-commonwealth-games-para-powerlifting-success

ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!

by admin
July 26, 2026
0

ಎದೆತುಂಬಿ ಹೇಳಿರುವೆ...ಪ್ರೀತಿಯಿಂದ ಬರೆದಿರುವೆ... ಮನವಿಟ್ಟು ಓದಿ... ಇದು ನನ್ನ ಅಂತರಾಳದ ಮಾತು..! ಬಹುಶಃ ಅಂದು ನನಗೆ ನಾಲ್ಕೈದು ವರ್ಷ. ಎಲ್ಲ ಮಕ್ಕಳಂತೆ ಓಡಾಡಿಕೊಂಡು ನಾನು ಆಟವಾಡುತ್ತಿದ್ದೆ. ಆದ್ರೆ...

devshayani-ekadashi-hari-shayani-significance

Astro- ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..?

by admin
July 25, 2026
0

ಇಂದು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ ಎಂದು ಗೋತ್ತೇ..? ಸಮಚರಣ ಸರೋಜಂ ಸಾಂದ್ರನೀಲಾಂಮುದಾಭಂ ಜಘನ ನಿಹಿತಪಾಣಿಂ ಮಂಡನಂ ಮಂಡನಾನಾಂ || ತರುಣ ತುಳಸೀಮಾಲಾಕಂಧರಂ ಕಂಜನೇತ್ರಂ...

sindhushree-ganesh-pole-vault-national-record-karnataka-sports

Sindhushree- ಬಡತನದಲ್ಲಿ ಅರಳಿದ ಪ್ರತಿಭೆ….! ಬಾಣದಂತೆ ಚಿಮ್ಮುವ ಈ ತರುಣಿ ಯಾರು..?

by admin
July 25, 2026
0

ಈಕೆಯ ಸಾಧನೆಗೆ ಸರ್ವಸ್ವವನ್ನು ತ್ಯಾಗ ಮಾಡಿದ್ದು ಅಪ್ಪ ಎಂಬ ಸಾಹುಕಾರ. ಪ್ರತಿದಿನ ಮಗಳ ತರಬೇತಿಗೆ ಒಂಚೂರು ತೊಂದರೆಯಾಗದಂತೆ ನೋಡಿಕೊಂಡಿದ್ದ ಕಾವಲುಗಾರ. ಯಾರು ಏನೇ ಅಂದ್ರೂ, ಮಗಳ ಪ್ರತಿಭೆ,...

The King of Branding: How David Beckham Built an Empire Beyond Football!

David Beckham – ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!

by admin
July 23, 2026
0

 ಮೈದಾನದ ಸ್ಟೈಲೀಶ್ ಪ್ಲೇಯರ್. ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್. ಬ್ರ್ಯಾಂಡಿಂಗ್ ಲೋಕದ ಕಿಂಗ್‍ಮೇಕರ್..!  ಆತ ಫುಟ್‍ಬಾಲ್ ಮೈದಾನದಲ್ಲಿ ಕಾಮನಬಿಲ್ಲಿನಂತೆ ಚಿತ್ತಾರ ಬಿಡಿಸುತ್ತಿದ್ದ ಕಲೆಗಾರ. ಕಾಲಿನ ಸ್ಪರ್ಶದಿಂದಲೇ ಚೆಂಡನ್ನು...

ranjith bajaj menerva fc

Football – ಇಂಡಿಯಾ ಫಿಫಾ ವಿಶ್ವಕಪ್‍ನಲ್ಲಿ ಯಾಕೆ ಆಡುತ್ತಿಲ್ಲ.. ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಫುಟ್‍ಬಾಲ್ ಕ್ರೀಡೆ ಧರ್ಮವಾಗಿ ಬೆಳೆಯಲು ಸಾಧ್ಯನಾ..?

by admin
July 22, 2026
0

ಇಂಡಿಯಾ ಫಿಫಾ ವಿಶ್ವಕಪ್‍ನಲ್ಲಿ ಯಾಕೆ ಆಡುತ್ತಿಲ್ಲ...? ಹೀಗೆ ಕೇಳುವುದು ತುಂಬಾ ಸುಲಭ. ಆದ್ರೆ ನಮ್ಮ ದೇಶದ ಫುಟ್‍ಬಾಲ್ ವ್ಯವಸ್ಥೆಯನ್ನು ಸರಿ ಮಾಡೋದು ಯಾರು..? ಭಾರತದಲ್ಲಿ ಕ್ರಿಕೆಟ್ ಆಟವೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram