ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

AUS vs SA 2nd Test : ಆಸ್ಟ್ರೇಲಿಯಾಕ್ಕೆ ಇನ್ನಿಂಗ್ಸ್‌ ಹಾಗೂ 182 ರನ್‌ಗಳ ಜಯ

Namratha Rao by Namratha Rao
December 29, 2022
in ಕ್ರಿಕೆಟ್, News, Newsbeat, Sports
david warner
Share on FacebookShare on TwitterShare on WhatsappShare on Telegram

AUS vs SA 2nd Test : ಆಸ್ಟ್ರೇಲಿಯಾಕ್ಕೆ ಇನ್ನಿಂಗ್ಸ್‌ ಹಾಗೂ 182 ರನ್‌ಗಳ ಜಯ

ಡೇವಿಡ್‌ ವಾರ್ನರ್‌(200) ಅಮೋಘ ದ್ವಿಶತಕ ಹಾಗೂ ಅಲೆಕ್ಸ್‌ ಕ್ಯಾರಿ(111) ಅವರ ಶತಕದ ಅಬ್ಬರದ ನಡುವೆ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಸೌತ್‌ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್‌ ಹಾಗೂ 182 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Related posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

August 29, 2026
KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

August 29, 2026

ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸೌತ್‌ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್‌ ಆಡಿದ ಆಸ್ಟ್ರೇಲಿಯಾ 575/8 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು.

ಮೊದಲ ಇನ್ನಿಂಗ್ಸ್‌ನಲ್ಲಿ 386 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಸೌತ್‌ ಆಫ್ರಿಕಾ 204 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಇನ್ನಿಂಗ್ಸ್‌ ಹಾಗೂ 182 ರನ್‌ಗಳ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ನೀಡಿದ 386 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಸೌತ್‌ ಆಫ್ರಿಕಾ ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಕಂಡಿತು. ಇನ್ನಿಂಗ್ಸ್‌ ಆರಂಭದಲ್ಲೇ ನಾಯಕ ಡೀನ್‌ ಎಲ್ಗರ್‌(0) ವಿಕೆಟ್‌ ಒಪ್ಪಿಸಿ ಹೊರ ನಡೆದರೆ. ನಂತರದಲ್ಲಿ ಆರಂಭಿಕ ಸರೆಲ್‌ ಎರ್ವಿನ್‌(21) ಹಾಗೂ ಡೆಬ್ರೈನ್‌(28) ಸಹ ಅಲ್ಪಮೊತ್ತಕ್ಕೆ ನಿರ್ಗಮಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ತೆಂಬಾ ಬವುಮಾ(65) ಅರ್ಧಶತಕ ಬಾರಿಸಿ ತಂಡಕ್ಕೆ ಸ್ವಲ್ಪಮಟ್ಟಿನ ಚೇತರಿಕೆ ನೀಡಿದರು. ಆದರೆ ನಂತರದಲ್ಲಿ ಬಂದ ಝುಂಡೊ(1), ವೆರ್ರೆನ್ನೆ(33), ಜಾನ್ಸನ್‌(5), ಮಹಾರಾಜ್(13), ರಬಾಡ(3), ನೋಕಿಯೇ(8) ಹಾಗೂ ಎನ್‌ಗಿಡಿ(19) ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ನಾಲ್ಕನೇ ದಿನದಾಟದಲ್ಲಿ ಸೌತ್‌ ಆಫ್ರಿಕಾ 204 ರನ್‌ಗಳಿಗೆ ಆಲೌಟ್‌ ಆಯಿತು.

ಆಸ್ಟ್ರೇಲಿಯಾ ಪರ ನೇಥಾನ್‌ ಲಿಯನ್‌ 3 ಹಾಗೂ ಸ್ಕಾಟ್‌ ಬೊಲ್ಯಾಂಡ್‌ 2 ವಿಕೆಟ್‌ ಪಡೆದು ಮಿಂಚಿದರೆ. ಸ್ಟಾರ್ಕ್‌, ಕಮ್ಮಿನ್ಸ್‌ ಹಾಗೂ ಸ್ಟೀವ್‌ ಸ್ಮಿತ್‌ ತಲಾ 1 ವಿಕೆಟ್‌ ಪಡೆದರು. ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ಡೇವಿಡ್‌ ವಾರ್ನರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ 3ನೇ ಟೆಸ್ಟ್‌ ಪಂದ್ಯ ಜನವರಿ 4ರಿಂದ ಸಿಡ್ನಿಯಲ್ಲಿ ನಡೆಯಲಿದೆ.

Tags: #saakshatvAUS vs SA 2nd TestAustralia innings
ShareTweetSendShare
Join us on:

Related Posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

by Shwetha
August 29, 2026
0

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಭಾರಿ ಅಕ್ರಮದ ಹಿಂದೆ ಪ್ರೇಮ...

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

by Shwetha
August 29, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

by Shwetha
August 29, 2026
0

ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಎಂದರೆ ಅಲ್ಲಿ ತಳಿರು ತೋರಣಗಳ ಶೃಂಗಾರ, ವಿದ್ಯುತ್ ದೀಪಗಳ ಅಲಂಕಾರ ಮತ್ತು ಮನೆಯ ಹೆಸರಿನ ಫಲಕಗಳು ರಾರಾಜಿಸುವುದು ಸಹಜ. ಆದರೆ ಇಲ್ಲೊಬ್ಬರು...

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

by Shwetha
August 29, 2026
0

ದೆಹಲಿ ಮತ್ತು ಬೆಂಗಳೂರು ನಡುವೆ ಈಗ ಹೊಸ ರಾಜಕೀಯ ಸಂಚಲನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ...

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

by Shwetha
August 29, 2026
0

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram