ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ
ಕ್ರಿಕೆಟ್ ಆಸ್ಟ್ರೇಲಿಯಾ ಜೂನ್ 11ರಿಂದ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯಕ್ಕಾಗಿ ತನ್ನ 15 ಮಂದಿ ತಂಡವನ್ನು ಅಧಿಕೃತವಾಗಿ ಘೋಷಿಸಿದೆ. ಈ ಬಾರಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾದ ವಿರುದ್ಧ ಕಣಕ್ಕಿಳಿಯಲಿದೆ.
ಅಧಿಕೃತವಾಗಿ ಪ್ರಕಟವಾದ ತಂಡದಲ್ಲಿ ಹಿರಿಯ ಆಟಗಾರರಿಗೂ ಜೊತೆಗೆ ಹೊಸ ಪ್ರತಿಭೆಗಳಿಗೂ ಸ್ಥಾನ ನೀಡಲಾಗಿದೆ. ಕ್ಯಾಪ್ಟನ್ ಪಾಟ್ ಕಮ್ಮಿನ್ಸ್ ನೇತೃತ್ವದ ಈ ತಂಡದಲ್ಲಿ ವೇಗಿ ಜೋಷ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್ ಹಾಗೂ ಸ್ಪಿನ್ನರ್ ನಾಥನ್ ಲಿಯಾನ್ ಪ್ರಮುಖ ಬೌಲಿಂಗ್ ಆಯ್ಕೆಗಳಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಲ್ಯಾಬುಶೇನ್, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ , ಆಕ್ರಮಣಶೀಲ ಬ್ಯಾಟಿಂಗ್‌ನಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ.
ತಂಡದ ಪಟ್ಟಿ ಹೀಗಿದೆ:
ಪ್ಯಾಟ್ ಕಮ್ಮಿನ್ಸ್
ಸ್ಕಾಟ್ ಬೋಲ್ಯಾಂಡ್
ಅಲೆಕ್ಸ್ ಕ್ಯಾರಿ
ಕ್ಯಾಮೆರೂನ್ ಗ್ರೀನ್
ಜೋಷ್ ಹ್ಯಾಜಲ್‌ವುಡ್
ಟ್ರಾವಿಸ್ ಹೆಡ್
ಜೋಶ್ ಇಂಗ್ಲಿಸ್
ಉಸ್ಮಾನ್ ಖವಾಜಾ
ಸ್ಯಾಮ್ ಕಾನ್ಸಾಸ್
ಮ್ಯಾಟ್ ಕುಣ್ನೆಮನ್
ಮಾರ್ನಸ್ ಲ್ಯಾಬುಶೇನ್
ನಾಥನ್ ಲಿಯಾನ್
ಸ್ಟೀವ್ ಸ್ಮಿತ್
ಮಿಚೆಲ್ ಸ್ಟಾರ್ಕ್
ಬ್ಯೂ ವೆಬ್‌ಸ್ಟರ್
ಮೊತ್ತಮೊದಲು ಫೈನಲ್‌ಗೆ ಆಯ್ಕೆಯಾದ ಹೊಸ ಮುಖಗಳು:
ಈ ತಂಡದಲ್ಲಿ ಬ್ಯೂ ವೆಬ್‌ಸ್ಟರ್ ಮತ್ತು ಸ್ಯಾಮ್ ಕಾನ್ಸಾಸ್ ಮೊದಲ ಬಾರಿಗೆ WTC ಫೈನಲ್‌ಗಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
2023ರ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ ಆಸ್ಟ್ರೇಲಿಯಾ, ಇನ್ನೊಮ್ಮೆ ಚಾಂಪಿಯನ್ ಟ್ರೋಫಿ ಕಾಯ್ದುಕೊಳ್ಳಲು ಬಲಿಷ್ಠ ತಂಡದೊಂದಿಗೆ ತಯಾರಿ ನಡೆಸುತ್ತಿದೆ. ಇತ್ತ ದಕ್ಷಿಣ ಆಫ್ರಿಕಾಗೂ ಇದೇ ಟಾರ್ಗೆಟ್, ಹೀಗಾಗಿ ಅಭಿಮಾನಿಗಳಿಗೆ ರಸದೌತಣ ಕಾದಿದೆ